ಬೆಂಗಳೂರು: ಕೊರೋನಾ ಬಗ್ಗೆ ಎಚ್ಚರ ತಪ್ಪಿದರೆ ಅಪಾಯ ಗ್ಯಾರಂಟಿ ಎನ್ನುವುದು ಮತ್ತೆ ಗೊತ್ತಾಗಿದೆ. ಕೊರೋನಾ ಲಕ್ಷಣ ಇಲ್ಲವೆಂದು ಮರೆಯಬೇಡಿ ಎಂದು ತಜ್ಞರು ಹೇಳಿದ್ದಾರೆ.
ಕೊರೋನಾ ಲಕ್ಷಣ ಇಲ್ಲದವರು ಕೂಡ ಬಲಿಯಾಗುತ್ತಿದ್ದಾರೆ. ಸೋಂಕಿನ ಲಕ್ಷಣ ಇಲ್ಲದಿದ್ದರೂ ಕೊರೋನಾ ಉಸಿರು ನಿಲ್ಲಿಸುತ್ತದೆ. ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕಿದರೆ ಆಪತ್ತು ಗ್ಯಾರಂಟಿ ಎಂದು ಹೇಳಲಾಗಿದೆ.
ಮೃತಪಟ್ಟವರ ಸ್ವ್ಯಾಬ್ ಟೆಸ್ಟ್ ಮಾಡಿಸಿದಾಗ ಕೊರೋನಾ ಇರುವುದು ಖಚಿತವಾಗಿದೆ. ಮೇಲ್ನೋಟಕ್ಕೆ ಆರೋಗ್ಯವಂತರಾಗಿರುವಂತೆ ಕಂಡುಬಂದರೂ ಅಪಾಯ ತಪ್ಪಿದ್ದಲ್ಲ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಈ ರೀತಿಯ ಪ್ರಕರಣಗಳು ಭಾರಿ ಏರಿಕೆಯಾಗುತ್ತಿವೆ ಎನ್ನಲಾಗಿದೆ.
ಸೋಂಕಿನ ಯಾವುದೇ ಲಕ್ಷಣ ಇಲ್ಲದಿದ್ದರೂ ಸೋಂಕು ತಗಲಿ ಸಾವನ್ನಪ್ಪಿದ್ದಾರೆ. ಟೆಸ್ಟ್ ಮಾಡಿದ ನಂತರದಲ್ಲಿ ಕೊರೋನಾ ಪಾಸಿಟಿವ್ ಇರುವುದು ಗೊತ್ತಾಗುತ್ತದೆ. ಮೃತರ ಮನೆಗೆ ತೆರಳಿ ಸ್ವ್ಯಾಬ್ ಟೆಸ್ಟ್ ಮಾಡಿಸಿದಾಗ ಈ ಮಾಹಿತಿ ಗೊತ್ತಾಗಿದೆ. ಬೆಂಗಳೂರಿನಲ್ಲಿ ಹೆಚ್ಚಿದ ಸಾವಿನ ಕಾರಣ ಕುರಿತು ಅಧ್ಯಯನ ಕೈಗೊಂಡ ಸಂದರ್ಭದಲ್ಲಿ ಮಾಹಿತಿ ಗೊತ್ತಾಗಿದೆ ಎಂದು ಹೇಳಲಾಗಿದೆ.