
ಬೆಂಗಳೂರು: ಅನಾರೋಗ್ಯ ಪೀಡಿತರಾಗಿದ್ದರೆ ಕೋವಿಡ್ ಸೋಂಕಿನ ಲಕ್ಷಣಗಳಿದ್ದರೆ ಏನು ಮಾಡಬೇಕು ಹಾಗೂ ವೈದ್ಯಕೀಯ ಸೇವೆ ಲಭ್ಯವಾಗುವ ವಿವಿಧ ಹಂತಗಳ ಕುರಿತಾದ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕಮಿಷನರ್ ಬಿ.ಹೆಚ್. ಅನಿಲ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಅನಾರೋಗ್ಯ ಪೀಡಿತರಾದವರು ಅಥವಾ ಸೋಂಕಿನ ಲಕ್ಷಣಗಳಿದ್ದರೆ ವೈದ್ಯಕೀಯ ಸೇವೆ ಪಡೆಯಲು ತಿಳಿಸಿದ್ದಾರೆ.
ಎಲ್ಲರೂ ಎಚ್ಚರಿಕೆಯಿಂದ ಕೋವಿಡ್ ಫ್ಲೋ ಚಾರ್ಟ್ ಅನುಸರಿಸಬೇಕು. ವೈದ್ಯರು ಮತ್ತು ಬಿಬಿಎಂಪಿ ತ್ವರಿತ ಕ್ರಮ ಕೈಗೊಳ್ಳಲು ಚಿಕಿತ್ಸೆ ನೀಡಲು ಇದು ನೆರವಾಗಲಿದೆ. ಯಾರೂ ಭೀತಿಗೆ ಒಳಗಾಗಬಾರದು ಎಂದು ಅವರು ತಿಳಿಸಿದ್ದಾರೆ.