ಬೆಂಗಳೂರು: ಅಶ್ಲೀಲ ವಿಡಿಯೋ ನೋಡುವಂತೆ ಪತ್ನಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಲತೀಫ್ ರೆಹಮಾನ್ ಎಂಬುವನ ವಿರುದ್ಧ ದೂರು ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2019ರಲ್ಲಿ ಲತೀರ್ ರೆಹಮಾನ್ ನನ್ನು ವೈದ್ಯೆ ಮದುವೆಯಾಗಿದ್ದು, ಮದುವೆಯಾದ ನಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಚಿನ್ನಾಭರಣ ಕಸಿದುಕೊಂಡು ಮನೆಯಿಂದ ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಆರೋಪಿ ಮೊಬೈಲ್ ನಲ್ಲಿ ಅಶ್ಲೀಲ ಫೋಟೋ, ವಿಡಿಯೋ ಹೆಚ್ಚಾಗಿ ನೋಡುತ್ತಿದ್ದ ಪತ್ನಿಗೂ ನೋಡುವಂತೆ ಕಿರುಕುಳ ನೀಡುತ್ತಿದ್ದ. ಪತ್ನಿಯ ಖಾತೆಯಲ್ಲಿದ್ದ ಹಣ ಪಡೆದು ಬೆಟ್ಟಿಂಗ್ ನಲ್ಲಿ ಕಳೆದುಕೊಂಡಿದ್ದಾನೆ ಎನ್ನಲಾಗಿದ್ದು, ನೊಂದ ವೈದ್ಯೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.