ಬೆಂಗಳೂರಿನ ಕೋರಮಂಗಲ ನಿವಾಸಿ ದಂಪತಿಗೆ ಅವರು ಸಾಕಿದ ನಾಯಿಯೇ ಸಂಕಷ್ಟವನ್ನ ತಂದೊಡ್ಡಿದೆ. ಸಾಕು ಶ್ವಾನವೊಂದು ಪಕ್ಕದ ಮನೆಯ 8 ವರ್ಷದ ಮಗುವಿಗೆ ಕಚ್ಚಿದ ಕಾರಣ ಮಗುವಿನ ಪೋಷಕರು ಶ್ವಾನ ಮಾಲೀಕರ ವಿರುದ್ಧ ದೂರನ್ನ ದಾಖಲಿಸಿದ್ದಾರೆ.
ಶ್ವಾನದ ದಾಳಿಗೆ ಒಳಗಾದ ಬಾಲಕಿಯನ್ನ ಪಾವನಿ ಶ್ರೀಯಾ ಎಂದು ಗುರುತಿಸಲಾಗಿದೆ. ಪಾವನಿ ಮನೆಯ ಮುಂದೆ ಆಡುತ್ತಿರುವಾಗ ಈ ಅವಘಡ ಸಂಭವಿಸಿದೆ. ಶ್ವಾನ ಮಾಲೀಕರಾದ ಆಸ್ತಾ ಹಾಗೂ ಸಿದ್ಧಾರ್ಥ್ ಬಾಲಕಿಯ ತಾಯಿ ಭಾಗ್ಯಲಕ್ಷ್ಮೀಯ ಜೊತೆ ಜಗಳವಾಡಿದ್ದಾರೆ. ಅಲ್ಲದೇ ಈ ಶ್ವಾನ ಮಕ್ಕಳು ಆಟವಾಡುತ್ತಿರುವ ವೇಳೆ ಸಮೀಪದಲ್ಲೇ ಓಡಾಡುತ್ತಿತ್ತು ಎಂದು ಭಾಗ್ಯಲಕ್ಷ್ಮೀ ಹೇಳಿದ್ದಾರೆ.
ಹೆಚ್1ಬಿ ವೀಸಾದಾರರಿಗೆ ಬಿಗ್ ರಿಲೀಫ್: ಬಿಡೆನ್ ಸರ್ಕಾರದಿಂದ ಮಹತ್ವದ ನಿರ್ಧಾರ
ಶ್ವಾನ ಮಗುವಿನ ಕೈಗೆ ಕಚ್ಚುತ್ತಿದ್ದಂತೆಯೇ ದಾಳಿಯಿಂದ ಮಗುವನ್ನ ತಾಯಿ ರಕ್ಷಣೆ ಮಾಡಿದ್ದಾರೆ. ಬಳಿಕ ಈ ಬಗ್ಗೆ ಶ್ವಾನ ಮಾಲೀಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ರೆ ಅವರು ಗಾಯಾಳು ಮಗುವಿನ ತಾಯಿಯ ಜೊತೆಗೇ ಜಗಳವಾಡಿದ್ದಾರೆ ಎನ್ನಲಾಗಿದೆ.
ಮಗುವನ್ನ ಬನ್ನೇರುಘಟ್ಟದ ರೇನ್ ಬೋ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಶ್ವಾನ ಮಾಲೀಕರ ವಿರುದ್ಧ ದೂರನ್ನ ದಾಖಲಿಸಲಾಗಿದೆ.