ಬೆಂಗಳೂರು: ಪತ್ರಕರ್ತರಿಗೆ ಕೋವಿಡ್ ವಿಮಾ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ.
ಪತ್ರಕರ್ತರನ್ನು ಕೋವಿಡ್ ವಿಮಾ ಪ್ಯಾಕೇಜ್ ನಲ್ಲಿ ಸೇರಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಹಾಗೂ ಎಡಿಟರ್ಸ್ ಗಿಲ್ಡ್ ವತಿಯಿಂದ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.
ಪತ್ರಕರ್ತರಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಲಾಗಿದ್ದು ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಎಂ, ಇತ್ತೀಚೆಗೆ ಮೃತಪಟ್ಟ ಬೆಂಗಳೂರು ವಿಜಯ ಕರ್ನಾಟಕದ ಹಿರಿಯ ಪತ್ರಕರ್ತ ಗೌರಿಪುರ ಚಂದ್ರು (ಜಿ.ಪಿ.ಚಂದ್ರಶೇಖರ)
ಮತ್ತು ಬೇಲೂರು ಪ್ರಜಾವಾಣಿ ವರದಿಗಾರ ಬಿ.ಎಂ.ರವೀಶ್ ಅವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.