ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮಿತಿಮೀರಿದ್ದು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಜನರು ಪ್ರಾಣ ಬಿಡ್ತಿದ್ದಾರೆ. ರಾಜ್ಯದ ವಿವಿಧೆಡೆಯಲ್ಲಿ ರೆಮಿಡಿಸಿವರ್ ಚುಚ್ಚು ಮದ್ದುಗಳನ್ನ ಬ್ಲಾಕ್ ಮಾರ್ಕೆಟ್ನಲ್ಲಿ ಮಾರಾಟ ಮಾಡುತ್ತಿರುವ ವಿಚಾರವಾಗಿ ಮಹತ್ವದ ಸಭೆ ಕರೆದಿದ್ದ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ್ರು.
ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದೊಂದು ಅತ್ಯಂತ ಕ್ಲಿಷ್ಟಕರ ಸಂದರ್ಭವಾಗಿದೆ. ಈ ಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮೊಟ್ಟಿಗೆ ನಿಂತಿದೆ. ಆದರೆ ಕೆಲ ಅಧಿಕಾರಿಗಳು ರೆಮಿಡಿಸಿವರ್ ಚುಚ್ಚು ಮದ್ದುಗಳನ್ನ ಅನ್ಯರಾಜ್ಯಕ್ಕೆ ರಫ್ತು ಮಾಡ್ತಿದ್ದಾರೆ ಎಂಬ ಆರೋಪ ಸರ್ಕಾರದ ಕಿವಿಗೆ ಬಿದ್ದಿದೆ.
ಈ ವಿಚಾರವಾಗಿ ನಾನೇ ತನಿಖೆ ನಡೆಸುತ್ತೇನೆ. ತಪ್ಪಿತಸ್ಥರನ್ನ ಪಾರು ಮಾಡುವ ಮಾತೇ ಇಲ್ಲ. ಯಾವುದೇ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದರೂ ಸಹ ಪರಿಣಾಮ ಭೀಕರವಾಗಿರಲಿದೆ. ಇದನ್ನೇ ಎಚ್ಚರಿಕೆ ಎಂದು ಭಾವಿಸಿದೆ. ಇನ್ಮುಂದೆ ಜನಸೇವೆಗೆ ಬದ್ಧರಾಗಿ. ಇಲ್ಲವಾದಲ್ಲಿ ತನಿಖೆ ಮಾಡಿಸಿ ಎಲ್ಲವನ್ನೂ ಬಯಲಿಗೆಳೆಯುತ್ತೇನೆ. ಎಚ್ಚರಿಕೆ ಕೆಲಸ ಮಾಡಿ ಎಂದು ಸಿಎಂ ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.