ರಾಜ್ಯದಲ್ಲಿ ಸದ್ಯ ಕೊರೊನಾ ಲಸಿಕೆಗಾಗಿ ಹಾಹಾಕಾರ ಶುರುವಾಗಿದೆ. ಕೇಂದ್ರದಿಂದ ಲಸಿಕೆ ಪೂರೈಕೆಯಲ್ಲಿ ವಿಳಂಬವಾಗಿದ್ದು ರಾಜ್ಯದ ಜನತೆ ಕೊರೊನಾ ಲಸಿಕೆ ಪಡೆಯಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವಂತೆ ಆಗಿದೆ.
ಇಂದು ಬೆಂಗಳೂರಿನಲ್ಲಿ ಕೊರೊನಾ ಲಸಿಕೆಯ ವಿಚಾರವಾಗಿ ಮಾತನಾಡಿದ ಸಿಎಂ ಯಡಿಯೂರಪ್ಪ, ಶೀಘ್ರದಲ್ಲೇ ರಾಜ್ಯಕ್ಕೆ ಅಗತ್ಯ ಪ್ರಮಾಣದ ಲಸಿಕೆ ಪೂರೈಕೆಯಾಗಲಿದೆ ಎಂಬ ಭರವಸೆ ನೀಡಿದ್ರು.
ರಾಜ್ಯಕ್ಕೆ ಶೀಘ್ರದಲ್ಲೇ ಕೊರೊನಾ ಲಸಿಕೆಗಳು ಪೂರೈಕೆ ಆಗಲಿದೆ. ಗ್ಲೋಬಲ್ ಟೆಂಡರ್ ಮೂಲಕ ಲಸಿಕೆಯನ್ನ ಖರೀದಿ ಮಾಡಲಿದ್ದೇವೆ. ಇದು ಆರೋಪ ಹಾಗೂ ರಾಜಕೀಯ ಲಾಭ ಪಡೆಯುವಂತಹ ಸಮಯವಲ್ಲ. ನಾವೆಲ್ಲರೂ ಒಂದಾಗಿ ಈ ಸಂಕಷ್ಟದ ಸಮಯವನ್ನ ಎದುರಿಸಬೇಕಿದೆ. ಕೋವಿಡ್ ನೆರವಿನ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಯಾವುದೇ ತಾರತಮ್ಯವನ್ನ ಎಸಗಿಲ್ಲ. ರಾಜ್ಯಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನ ಕೇಂದ್ರ ಸರ್ಕಾರ ನೀಡುತ್ತಲೇ ಬಂದಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ರು.