ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು ಇಂದಿನಿಂದ ಶಾಪಿಂಗ್ ಮಾಲ್ ಗಳು ಪುನಾರಂಭವಾಗಲಿವೆ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಬಟ್ಟೆ ಅಂಗಡಿಗಳಲ್ಲಿ ಟ್ರಯಲ್ ನಿಷೇಧಿಸಲಾಗಿದೆ.
ನಿಯಮಗಳನ್ನು ಪಾಲಿಸುವ ಮೂಲಕ ಮಾಲ್ ತೆರೆಯಲು ಅನುಮತಿ ನೀಡಿದ್ದು, ಬಟ್ಟೆಗಳ ಅಳತೆ ನೋಡಲು ಟ್ರಯಲ್ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಲಿಫ್ಟ್ ನಲ್ಲಿ ಕಡಿಮೆ ಜನ ಸೇರಿದಂತೆ ಎಲ್ಲಾ ನಿಯಮಗಳನ್ನು ಪಾಲಿಸಬೇಕಿದೆ.
ಇದೇ ವೇಳೆ ಬಟ್ಟೆಯನ್ನು ಖರೀದಿಸುವಾಗ ಅಳತೆ ನೋಡಲು ಟ್ರಯಲ್ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.