ಮಂಗಳೂರಿನ ಸೋಮೇಶ್ವರದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಗಂಟಲಲ್ಲಿ ಚಾಕೊಲೇಟ್ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲಗುಡ್ಡೆ ನಿವಾಸಿ ರಹೀಮ್ ಎಂಬುವರ ಪುತ್ರ ಚಾಕೊಲೇಟ್ ತಿನ್ನುವಾಗ ಗಂಟಲಲ್ಲಿ ಸಿಲುಕಿ ಉಸಿರು ಕಟ್ಟಿದ್ದು, ಅಸ್ವಸ್ಥಗೊಂಡಿದ್ದಾನೆ.
ಆತಂಕಗೊಂಡ ಪೋಷಕರು ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.