ಬೆಳಗಾವಿ: ವರುಣನ ಆರ್ಭಟಕ್ಕೆ ನಲುಗಿರುವ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿವುಂಟಾಗಿದೆ. ನದಿ, ಹಳ್ಳ, ಕೊಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ಯುವಕನೊಬ್ಬ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಹಾರಿ ಹುಚ್ಚಾಟ ಮೆರೆದಿದ್ದಾನೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಯುವಕನೊಬ್ಬ ಭಾರಿ ಮಳೆ, ಪ್ರವಾಹದ ನಡುವೆ ಟೆಲಿಫೋನ್ ಟವರ್ ಮೇಲೇರಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಹಾರಿ ನದಿಯಲ್ಲಿ ಈಜಿ ಸಂಭ್ರಮಿಸಿದ್ದಾನೆ.
ಯುವಕನನ್ನು ಸಾಗರ್ ಕೋಳಿ ಎಂದು ಗುರುತಿಸಲಾಗಿದ್ದು, ಪ್ರವಾಹದ ನಡುವೆ ಹುಚ್ಚಾಟ ಮೆರೆದ ಯುವಕನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.