
ಚಿಕ್ಕಮಗಳೂರು: ಮಕ್ಕಳು ನಿರ್ಲಕ್ಷಿಸಿದ್ದರಿಂದ ಮನನೊಂದ ತಂದೆ-ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರಿನ ಹೊಸಮನೆ ಬಡಾವಣೆಯಲ್ಲಿ ಘಟನೆ ನಡೆದಿದೆ.
85 ವರ್ಷದ ಗೋಪಾಲಕೃಷ್ಣ ಮತ್ತು 83 ವರ್ಷದ ರತ್ನಮ್ಮ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಇಬ್ಬರೂ ಮಕ್ಕಳು ಸರಿಯಾಗಿ ನೋಡಿಕೊಳ್ಳದ ಕಾರಣ ಬೇರೆ ಮನೆಯಲ್ಲಿ ವಾಸವಾಗಿದ್ದರು.
ಇಳಿವಯಸ್ಸಲ್ಲಿ ಮಕ್ಕಳು ನಿರ್ಲಕ್ಷ ವಹಿಸಿದ್ದರಿಂದ ಮನನೊಂದು ಗೋಪಾಲಕೃಷ್ಣ ನೇಣು ಹಾಕಿಕೊಂಡಿದ್ದಾರೆ. ರತ್ನಮ್ಮ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಸಾವಿಗೆ ತಾವೇ ಕಾರಣ ಎಂದು ಮೃತರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.