ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ತಲಕಾವೇರಿಯಲ್ಲಿ 7 ಗಂಟೆ 5 ಐದು ನಿಮಿಷಕ್ಕೆ ತೀರ್ಥೋದ್ಭವವಾಗಿದ್ದು ಕನ್ಯಾ ಲಗ್ನದಲ್ಲಿ ತೀರ್ಥ ಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಿದ್ದಾಳೆ.
ಬ್ರಹ್ಮಕುಂಡಿಕೆಯಲ್ಲಿ ಸ್ನಾನಕ್ಕೆ ಅವಕಾಶ ನೀಡಿಲ್ಲ. ತೀರ್ಥೋದ್ಭವದ ವೇಳೆ ಸೀಮಿತ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. 35 ಸ್ವಯಂಸೇವಕರು, ದೇಗುಲ ಸಮಿತಿಯ ಸದಸ್ಯರು, ಆಯ್ದ ಜನಪ್ರತಿನಿಧಿಗಳಿಂದ ಕಾವೇರಿ ತೀರ್ಥೋದ್ಭವದ ದರ್ಶನ ಪಡೆಯಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಸೀಮಿತ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.