ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ, ಉದ್ಯಾನಗಳ ನಗರಿ ಎಂದೆಲ್ಲಾ ಕರೆಸಿಕೊಳ್ಳುವ, ಬೆಂಗಳೂರು ಬಗ್ಗೆ ನಿಮಗೊಂದಿಷ್ಟು ಮಾಹಿತಿ ಇಲ್ಲಿದೆ. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಮೊದಲಿಗೆ ಬೆಂದಕಾಳೂರು ಎಂದು ಕರೆಯಲಾಗುತ್ತಿತ್ತು.
ಕಳೆದ 20 ವರ್ಷಗಳಲ್ಲಿ ಬೆಂಗಳೂರು ಬೆಳವಣಿಗೆ ದಾಖಲೆ ಪ್ರಮಾಣದಲ್ಲಿದೆ. ವಾಣಿಜ್ಯ ಮತ್ತು ರಕ್ಷಣೆ, ಏರ್ ಪೋರ್ಟ್ ನಿರ್ವಹಣೆ ಹೊಂದಿರುವ ಸಿಟಿ ಇದಾಗಿದೆ. ವಿಶ್ವದಲ್ಲಿಯೇ ಅತಿಹೆಚ್ಚು ದ್ವಿಚಕ್ರ ವಾಹನಗಳ ನಗರಗಳಲ್ಲಿ ಬೆಂಗಳೂರು ಒಂದಾಗಿದೆ. ಮಾತ್ರವಲ್ಲ, ಭಾರತದಲ್ಲಿ ಅತಿ ಹೆಚ್ಚು ಸಾಫ್ಟ್ ವೇರ್ ಕಂಪನಿಗಳಿರುವ ನಗರ ಇದಾಗಿದೆ. ಅತಿ ಹೆಚ್ಚು ಸಂಚಾರ ದಟ್ಟಣೆಯ ಸಿಟಿ ಕೂಡ ಆಗಿದೆ.
ಫ್ಯಾಷನ್ ಕ್ಯಾಪಿಟಲ್ ಎಂದೂ ಕೂಡ ಬೆಂಗಳೂರನ್ನು ಕರೆಯಲಾಗುತ್ತದೆ. ಬೆಂಗಳೂರು ವಿಶ್ವವಿದ್ಯಾಲಯದ ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುತ್ತಾರಂತೆ. ಇಷ್ಟು ಮಾತ್ರವಲ್ಲ, ಹೆಚ್ಚಿನ ಸಂಖ್ಯೆಯ ಉದ್ಯಾನ, ಕೆರೆ, ಸಿಟಿಬಸ್ ಗಳಲ್ಲಿ ಹೆಚ್ಚಿನ ಜನ ಸುತ್ತಾಡುವ ಸ್ಥಳ ಎಂಬ ಹೆಗ್ಗಳಿಕೆ ಬೆಂಗಳೂರಿನದು ಇಷ್ಟು ಮಾತ್ರವಲ್ಲ, ಇನ್ನೂ ಹತ್ತು ಹಲವು ಹೆಗ್ಗಳಿಕೆ ಬೆಂಗಳೂರಿಗೆ ಇದೆ.