
ಬೆಂಗಳೂರು: ರೈತರು ಕೃಷಿ ಜಮೀನಿನ ಮಾಲೀಕತ್ವದ ಕುರಿತಂತೆ ರೈತರು ಅನುಭವಿಸುತ್ತಿರುವ ತೊಂದರೆ ನಿವಾರಿಸಲು ಸರ್ಕಾರ ಕ್ರಮಕೈಗೊಂಡಿದೆ. ಪೌತಿಖಾತೆ ಆಂದೋಲನವನ್ನು ಮತ್ತೆ ಚುರುಕುಗೊಳಿಸಲು ಮುಂದಾಗಿದೆ.
ಜಿಲ್ಲಾಧಿಕಾರಿಯಿಂದ ಗ್ರಾಮ ಲೆಕ್ಕಾಧಿಕಾರಿವರೆಗಿನ ಅಧಿಕಾರಿಗಳು ನಿರ್ವಹಿಸಬೇಕಿರುವ ಜವಾಬ್ದಾರಿ, ಕೈಗೊಳ್ಳಬೇಕಿರುವ ಕ್ರಮಗಳು ಸೇರಿದಂತೆ ವಿಸ್ತೃತ ಮಾರ್ಗಸೂಚಿಯನ್ನು ಕಂದಾಯ ಇಲಾಖೆ ಹೊರಡಿಸಿದೆ. ಭೂ ಕಂದಾಯ ವಿಭಾಗ ಹೊರಡಿಸಿದ ಮಾರ್ಗಸೂಚಿಯಂತೆ, ಪೌತಿ ಖಾತೆ ಆಂದೋಲನ ನಿರಂತರವಾಗಿದ್ದು ತಹಶೀಲ್ದಾರರು ನೇತೃತ್ವ ವಹಿಸಿ ಹೆಚ್ಚಿನ ರೈತರು ಪ್ರಯೋಜನ ಪಡೆಯುವಂತೆ ನೋಡಿಕೊಳ್ಳಬೇಕೆಂದು ಹೇಳಲಾಗಿದೆ.
ಕೃಷಿ ಜಮೀನಿನ ಮಾಲೀಕ ಮರಣ ಹೊಂದಿದ ನಂತರ ಮಾಲೀಕತ್ವ ಉತ್ತರಾಧಿಕಾರಿಗಳ ಹೆಸರಿಗೆ ವರ್ಗಾವಣೆಯಾಗದೇ ಸಮಸ್ಯೆ ಎದುರಾಗುತ್ತದೆ. ಪೌತಿ ಖಾತೆ ಆಂದೋಲನದ ಮೂಲಕ ಜಮೀನಿನ ಮಾಲೀಕತ್ವ ಉತ್ತರಾಧಿಕಾರಿಗಳಿಗೆ ಸಿಗುತ್ತದೆ. ಇದರಿಂದ ರೈತರು ಜಮೀನಿನ ಅಭಿವೃದ್ಧಿಗೆ ಸಾಲ, ಬೆಳೆನಷ್ಟಕ್ಕೆ ಪರಿಹಾರ, ವಿಮೆ ಮೊದಲಾದ ಪ್ರಯೋಜನ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಲಾಗಿದೆ.