alex Certify ಮೊಬೈಲ್ ಬಳಕೆದಾರರಿಗೆ ಮುಖ್ಯ ಮಾಹಿತಿ: ಕಿರಿಕಿರಿಯ ಕೊರೋನಾ ಕಾಲರ್ ಟ್ಯೂನ್ ತೆಗೆಯಲು ಇಲ್ಲಿದೆ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಬಳಕೆದಾರರಿಗೆ ಮುಖ್ಯ ಮಾಹಿತಿ: ಕಿರಿಕಿರಿಯ ಕೊರೋನಾ ಕಾಲರ್ ಟ್ಯೂನ್ ತೆಗೆಯಲು ಇಲ್ಲಿದೆ ಸುಲಭ ವಿಧಾನ

ದೇಶದಲ್ಲಿ ಕೊರೊನಾ ಸೋಂಕು ಹರಡುವುದು ಆರಂಭವಾದ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೊಬೈಲ್ ಗಳಲ್ಲಿ ಕೊರೋನಾ ಕಾಲರ್ ಟ್ಯೂನ್ ಆರಂಭವಾಗಿದೆ. ಇದರಿಂದಾಗಿ ಕರೆ ಮಾಡುವವರು ಕಿರಿಕಿರಿ ಅನುಭವಿಸುವಂತಾಗಿದೆ.

ಕಾಲರ್ ಟ್ಯೂನ್ ತೆಗೆಯುವ ವಿಧಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೀಚರ್ ಫೋನುಗಳಲ್ಲಿ *646*224# ಡಯಲ್ ಮಾಡಿದರೆ ಕಾಲರ್ ಟ್ಯೂನ್ ಸ್ಥಗಿತಗೊಳ್ಳಲಿದೆ. ಏರ್ಟೆಲ್ ಸಿಮ್ ಹೊಂದಿದ ಸ್ಮಾರ್ಟ್ ಫೋನ್ ನಿಂದ *646*224# ಡಯಲ್ ಮಾಡಿ 1 ಒತ್ತಿದ್ದರೆ ಕಾಲರ್ ಟ್ಯೂನ್ ಸ್ಥಗಿತಗೊಳ್ಳಲಿದೆ.

ಅದೇ ರೀತಿ ವೊಡಾಫೋನ್ ಐಡಿಯಾ ಸಿಮ್ ಬಳಕೆದಾರರು ಕಾಲರ್ ಟ್ಯೂನ್ ಕೇಳಿಸುವಾಗ ಸ್ಟಾರ್ ಅಥವಾ 1 ಡಯಲ್ ಮಾಡಿದರೆ ಕಾಲರ್ ಟ್ಯೂನ್ ಸ್ಥಗಿತಗೊಳ್ಳಲಿದೆ. ಜಿಯೋ ಸಿಮ್ ನಲ್ಲಿ ಸ್ಟಾಪ್(STOP) ಎಂದು ಟೈಪ್ ಮಾಡಿ 155223 ಗೆ ಕಳಿಸಿದರೆ ಕಾಲರ್ ಟ್ಯೂನ್ ನಿಲ್ಲುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...