alex Certify ಮೊದಲು ಹಳೆಯ ಪ್ಯಾಕೇಜ್​ ಲೆಕ್ಕ ಕೊಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲು ಹಳೆಯ ಪ್ಯಾಕೇಜ್​ ಲೆಕ್ಕ ಕೊಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಆಗ್ರಹ

ರಾಜ್ಯ ಸರ್ಕಾರ ಘೋಷಣೆ ಮಾಡಿದ ಕೊರೊನಾ ವಿಶೇಷ ಪ್ಯಾಕೇಜ್​​ಗೆ ವಿರೋಧ ಪಕ್ಷದ ನಾಯಕರು ಒಬ್ಬರಾದ ಮೇಲೆ ಒಬ್ಬರಂತೆ ಅಸಮಾಧಾನ ಹೊರಹಾಕ್ತಿದ್ದಾರೆ. ಇದೀಗ ಈ ಸಾಲಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಸಹ ಸೇರಿದ್ದು ಇದು ವಿಪಕ್ಷಗಳ ಒತ್ತಡಕ್ಕೆ ಮಣಿದು ಕಾಟಾಚರಕ್ಕೆ ತಂದ ಪ್ಯಾಕೇಜ್​ ಆಗಿದೆ ಎಂದು ವ್ಯಂಗ್ಯವಾಡಿದ್ರು.

ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಮೊದಲು ನೀವು ನಿಮ್ಮ ಹಳೆಯ ಪ್ಯಾಕೇಜ್​ನ ಲೆಕ್ಕಾಚಾರವನ್ನ ಕೊಡಿ. ಕಳೆದ ಬಾರಿ ನೀವು ಆಟೋ ಡ್ರೈವರ್​ಗೆ ಹಣ ಕೊಡುತ್ತೇನೆ ಎಂದು ಹೇಳಿದ್ರಿ. ಆದರು ಎಷ್ಟು ಜನಕ್ಕೆ ನಿಮ್ಮ ಪರಿಹಾರ ಧನ ಬಂದು ತಲುಪಿದೆ..? ಇಂತಹ ಸುಳ್ಳು ಪ್ಯಾಕೇಜ್​ಗಳನ್ನ ನಾವು ತುಂಬಾ ಕಂಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಮೇಲೆಯೂ ನಮಗೆ ನಂಬಿಕೆ ಹೋಗಿದೆ. ಹಳೆಯ ಪ್ಯಾಕೇಜ್​ನ ಪರಿಹಾರ ಧನವನ್ನ ಸರಿಯಾಗಿ ನೀಡಿದ್ರೆ ಮಾತ್ರ ಈ ಪ್ಯಾಕೇಜ್​ನ್ನು ನಂಬಬಹುದು ಎಂದು ಎಂದು ಹೇಳಿದ್ರು.

ತಮಿಳುನಾಡಿನಲ್ಲಿ ಪ್ರತಿಯೊಬ್ಬರಿಗೆ 4000 ರೂಪಾಯಿ ಘೋಷಣೆ ಮಾಡಲಾಗಿದೆ. ಆಂಧ್ರ ಪ್ರದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆರಡರಲ್ಲಿಯೂ ಕೋವಿಡ್ ಚಿಕಿತ್ಸೆ ಉಚಿತವಾಗಿ ಸಿಗ್ತಿದೆ. ನಮ್ಮ ರಾಜ್ಯಗಳಲ್ಲೂ ಇಂತಹ ಸೌಲಭ್ಯದ ಅವಶ್ಯಕತೆ ಇದೆ. ರಾಜ್ಯದಲ್ಲಿ ಕೋವಿಡ್​ ಸೋಂಕು ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿದೆ. ಆದರೆ ಸರ್ಕಾರ ಮಾತ್ರ ಬೆಂಗಳೂರಿಗೆ ಮಾತ್ರ ಸೀಮಿತ ಎಂಬಂತೆ ವರ್ತಿಸುತ್ತಿದೆ ಎಂದು ಗುಡುಗಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...