ಬೆಂಗಳೂರು: ಅ. 22 ರ ನಾಲ್ಕನೇ ಶನಿವಾರದಿಂದ ವೀಕೆಂಡ್ ರಜೆ ಸೇರಿದಂತೆ ದೀಪಾವಳಿ ಹಬ್ಬಕ್ಕೆ ಐದು ದಿನ ರಜೆ ಇದ್ದು, ಹೆಚ್ಚಿನ ಸಂಖ್ಯೆಯ ಜನ ಊರಿಗೆ ಹೊರಟಿದ್ದಾರೆ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡಿರುವ ಕೆಲವು ಖಾಸಗಿ ಬಸ್ ಗಳು ಟಿಕೆಟ್ ದರವನ್ನು ಭಾರಿ ಏರಿಕೆ ಮಾಡಿವೆ.
ಕೆಲವು ಖಾಸಗಿ ಬಸ್ ಗಳು ವಿಮಾನದಷ್ಟೇ ದುಬಾರಿ ಟಿಕೆಟ್ ದರ ಹೆಚ್ಚಳ ಮಾಡಿವೆ. ಅಕ್ಟೋಬರ್ 21ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಟ್ರಾವೆಲ್ಸ್ ವೊಂದರ ಟಿಕೆಟ್ ದರ 5,000 ರೂ. ನಿಗದಿಪಡಿಸಲಾಗಿದೆ. ವಿಮಾನ ಟಿಕೆಟ್ ದರ 5000 ರೂ.ನಿಂದ 5500 ರೂ. ಇದೆ.
ಬೆಂಗಳೂರಿನಿಂದ ಮಂಗಳೂರಿಗೆ 3,600 ರೂ. ಬಸ್ ಟಿಕೆಟ್ ದರ ಇದ್ದು, ವಿಮಾನ ದರ 3700 ರೂ. ಇದೆ. ಖಾಸಗಿ ಬಸ್ ಗಳಲ್ಲಿ ಟಿಕೆಟ್ ದರವನ್ನು ಭಾರಿ ಏರಿಕೆ ಮಾಡಿರುವುದಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.