alex Certify ಇದು ಎತ್ತಿನ ಗಾಡಿಯೋ, ಅಂಬಾಸಿಡರ್‌ ಕಾರೋ…? ಮಾಲಿನ್ಯ ರಹಿತ ಸಾರಿಗೆ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ಎತ್ತಿನ ಗಾಡಿಯೋ, ಅಂಬಾಸಿಡರ್‌ ಕಾರೋ…? ಮಾಲಿನ್ಯ ರಹಿತ ಸಾರಿಗೆ ಫೋಟೋ ವೈರಲ್

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎತ್ತಿನ ಗಾಡಿಯೊಂದನ್ನು ಅಂಬಾಸಿಡರ್‌ ಕಾರಿನ ಹೊರಮೈನ ಹಿಂಭಾಗದಂತೆ ಮಾಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಗಾಡಿ ಈಗ ಉದ್ಯಮಿ ಆನಂದ್ ಮಹಿಂದ್ರಾರ ಗಮನ ಸೆಳೆದಿದ್ದು, ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಯಾವಾಗಲೂ ಫನ್ನಿ ವಿಡಿಯೋಗಳು ಹಾಗೂ ಮಾಹಿತಿಭರಿತ ಪೋಸ್ಟ್‌ಗಳ ಮೂಲಕ ದೇಶದ ಯುವ ಸಮುದಾಯದೊಂದಿಗೆ ಎಂಗೇಜ್ ಆಗಿರುತ್ತಾರೆ ಮಹಿಂದ್ರಾ & ಮಹಿಂದ್ರಾ ಸಮೂಹದ ಚೇರ್ಮನ್.

“ಎಲಾನ್ ಮಸ್ಕ್ ಹಾಗೂ ಟೆಸ್ಲಾ ಸಹ ಇದಕ್ಕಿಂತ ಕಡಿಮೆ ವೆಚ್ಚದಲ್ಲಿ ನವೀಕರಿಸಬಲ್ಲ ಇಂಧನದ ಆವಿಷ್ಕಾರದ ಬಗ್ಗೆ ಚಿಂತಿಸಲಾರರು. ಮೀಥೇನ್‌ ಬಗ್ಗೆ ಲೆಕ್ಕ ಹಾಕಿದ ಪಕ್ಷದಲ್ಲಿ, ಮಾಲಿನ್ಯದ ಮಟ್ಟದ ಬಗ್ಗೆ ಖಚಿತವಾಗೆ ಹೇಳಲಾರೆ….” ಎಂದು ವಿಡಿಯೋ ಜೊತೆಗೆ ಪೋಸ್ಟ್ ಮಾಡಿದ್ದಾರೆ ಮಹಿಂದ್ರಾ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...