
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಳೆಕುರುಬರಹಳ್ಳಿಯಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿದೆ.
32 ವರ್ಷದ ವ್ಯಕ್ತಿ ಕೊಲೆಯಾಗಿದ್ದು ಆತನ ಸಹೋದರನೇ ಮಂಗಳವಾರ ತಡರಾತ್ರಿ ಅಣ್ಣನನ್ನು ಕೊಲೆ ಮಾಡಿದ್ದಾನೆ. ಸಹೋದರರ ನಡುವೆ ರಾತ್ರಿ ಜಗಳವಾಗಿದ್ದು ಅಣ್ಣ ಮನೆಯ ಹೊರಗಡೆ ಮಲಗಿದ್ದಾನೆ. ಮಧ್ಯರಾತ್ರಿ ಮನೆಯಿಂದ ಹೊರಬಂದು ಮಚ್ಚಿನಿಂದ ಥಳಿಸಿ ಅಣ್ಣನನ್ನು ಹತ್ಯೆ ಮಾಡಿದ ತಮ್ಮ ಏನೂ ಗೊತ್ತಿಲ್ಲದಂತೆ ಮನೆಯೊಳಗೆ ಹೋಗಿ ಮಲಗಿಕೊಂಡಿದ್ದಾನೆ.
ಬೆಳಗ್ಗೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು ತಮ್ಮನ ಬಟ್ಟೆಯ ಮೇಲೆ ರಕ್ತದ ಕಲೆಗಳು ಕಂಡು ಬಂದಾಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ಬಗ್ಗೆ ತಮ್ಮ ಮಾಹಿತಿ ನೀಡಿದ್ದಾನೆ. ತಮ್ಮನ ಪತ್ನಿಯೊಂದಿಗೆ ಅಣ್ಣ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದು ಇದನ್ನು ಸಹಿಸದ ತಮ್ಮ ಅಣ್ಣನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
4 ವರ್ಷಗಳ ಹಿಂದೆ ಮೃತನ ಪತ್ನಿ ದೂರವಾಗಿದ್ದಾಳೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.