ಬೆಂಗಳೂರು: ಜನವರಿ 1ರಿಂದ ಶಾಲೆ-ಕಾಲೇಜು ಆರಂಭವಾಗಲಿದ್ದು, ಈ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಈಗಾಗಲೇ ಜನವರಿ 1ರಿಂದ ಶಾಲೆ ಆರಂಭ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಈ ಬಗ್ಗೆ ನಡೆಸಿರುವ ಸಿದ್ಧತೆಗಳ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಆದರೆ ಶಾಲೆ ಆರಂಭದ ಬಗ್ಗೆ ಮತ್ತೆ ಬೇರೆ ಗೊಂದಲಗಳಿಲ್ಲ ಎಂದರು.
ಜನವರಿ 1ರಿಂದ 6-9ನೇ ತರಗತಿವರೆಗೂ ವಿದ್ಯಾಗಮ ತರಗತಿ ಕೂಡ ಆರಂಭವಾಗಲಿದೆ. ಎಸ್.ಎಸ್.ಎಲ್.ಸಿ, ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿದೆ ಎಂದು ಹೇಳಿದರು.