alex Certify BREAKING NEWS: ವ್ಯಾಕ್ಸಿನ್ ಬಾಕ್ಸ್ ಇಳಿಸುವ ವೇಳೆ ಸಿಬ್ಬಂದಿ ಎಡವಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ವ್ಯಾಕ್ಸಿನ್ ಬಾಕ್ಸ್ ಇಳಿಸುವ ವೇಳೆ ಸಿಬ್ಬಂದಿ ಎಡವಟ್ಟು

ಬೆಂಗಳೂರು: ಕೊರೊನಾ ಲಸಿಕೆ ಕೋವಿಶೀಲ್ಡ್ ಬಾಕ್ಸ್ ಇಳಿಸುವ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಎಡವಟ್ಟು ಮಾಡಿರುವ ಘಟನೆ ಬೆಂಗಳೂರಿನ ಸ್ಟೇಟ್ ವ್ಯಾಕ್ಸಿನ್ ಸ್ಟೋರ್ ಬಳಿ ನಡೆದಿದೆ.

ಪುಣೆಯ ಸೀರಮ್ ಇನ್ ಸ್ಟಿಟ್ಯೂಟ್ ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ 54 ಕೋವಿಶೀಲ್ಡ್ ವ್ಯಾಕ್ಸಿನ್ ಬಾಕ್ಸ್ ಗಳನ್ನು ಆನಂದ್ ರಾವ್ ಸರ್ಕಲ್ ಬಳಿಯ ವ್ಯಾಕ್ಸಿನ್ ಸ್ಟೋರೇಜ್ ಗೆ ರವಾನಿಸಲಾಗಿದ್ದು, ಈ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಅವಘಡವೊಂದು ಸಂಭವಿಸಿದೆ.

ವಾಹನದಿಂದ ಕೋವಿಶೀಲ್ಡ್ ಬಾಕ್ಸ್ ಗಳನ್ನು ಸಿಬ್ಬಂದಿಗಳು ಇಳಿಸುವ ವೇಳೆ ವ್ಯಾಕ್ಸಿನ್ ಇದ್ದ ಬಾಕ್ಸ್ ಕೆಳಗೆ ಬಿದ್ದಿದೆ. ಇನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆನಂದ್ ರಾವ್ ಸರ್ಕಲ್ ಬಳಿ ಇರುವ ಸ್ಟೇಟ್ ವ್ಯಾಕ್ಸಿನ್ ಸ್ಟೋರೇಜ್ ವರೆಗೂ ಸೂಕ್ತ ಭದ್ರತೆ ಇಲ್ಲದೆಯೇ ವ್ಯಾಕ್ಸಿನ್ ರವಾನಿಸಿರುವುದು ಕೂಡ ಸರ್ಕಾರದ ವಿರುದ್ಧ ಅಸಮಾಧಾನಕ್ಕೆ ಕಾರಣವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...