ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಕ್ಷಣ ಕ್ಷಣಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಿಡ್ನಾಪ್ ಪ್ರಕರಣದ ಹಿಂದೆ ಮಹಿಳೆಯ ಕೈವಾಡವಿದೆ ಎಂಬ ಅನುಮಾನ ಮೂಡಿತ್ತು. ಇದೀಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಬೆಳ್ಳಂದೂರು ಬಳಿ ಪತ್ತೆಯಾಗಿರುವ ವರ್ತೂರು ಪ್ರಕಾಶ್ ಅವರ ಕಾರಿನಲ್ಲಿ ಯುವತಿಯ ದುಪ್ಪಟ್ಟ ಪತ್ತೆಯಾಗಿದ್ದು, ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಕಥೆಯನ್ನು ಹೇಳುತ್ತಿದೆ. ವರ್ತೂರು ಅವರನ್ನು ಹನಿಟ್ರ್ಯಾಪ್ ಮಾಡಿ ಖೆಡ್ಡಾಗೆ ಕೆಡವಲು ಯತ್ನಿಸಲಾಗಿತ್ತೇ? ಎಂಬ ಅನುಮಾನ ಆರಂಭವಾಗಿದೆ.
ಇನ್ನು ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಹಾಗೂ ಕಾರು ಪತ್ತೆ ಪ್ರಕರಣವನ್ನು ಬೆಳ್ಳಂದೂರು ಪೊಲೀಸರು, ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ವರ್ಗಾಯಿಸಿದ್ದಾರೆ.