ಮಂಗಳೂರು: ರಾಮ ಮಂದಿರದ ದೇಣಿಗೆ ಸಂಗ್ರಹದ ವಿಚಾರವಾಗಿ ಪಿ ಎಫ್ ಐ ಕಾರ್ಯದರ್ಶಿ ಅನೀಸ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಮ ಮಂದಿರಕ್ಕೆ ಒಂದು ಪೈಸೆ ಹಣವನ್ನೂ ನೀಡಬೇಡಿ. ಅದು ರಾಮ ಮಂದಿರವಲ್ಲ ಆರ್ ಎಸ್ ಎಸ್ ಮಂದಿರ ಎಂದು ಗುಡುಗಿದ್ದಾರೆ.
ಮಂಗಳೂರಿನ ಉಳ್ಳಾಲದಲ್ಲಿ ಮಾತನಾಡಿದ ಅನೀಸ್ ಅಹ್ಮದ್, ರಾಮ ಮಂದಿರ ಆರ್ ಎಸ್ ಎಸ್ ಮಂದಿರವಾಗಿದೆ. ದೇಣಿಗೆ ಸಂಗ್ರಹಕ್ಕೆ ಬಂದರೆ ಮುಸ್ಲೀಮರು ಒಂದು ಪೈಸೆಯನ್ನೂ ಕೊಡಬೇಡಿ. ಪಿ ಎಫ್ ಐ ನ ಶತ್ರು ಅಂದ್ರೆ ಅದು ಆರ್ ಎಸ್ ಎಸ್ ಕ್ಯಾನ್ಸರ್ ಇದ್ದಂತೆ ಅದು ವಾಸಿಯಾಗದ ಕಾಯಿಲೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮತ್ತೆ ಹೆಚ್ಚುತ್ತಿದೆ ಕೊರೊನಾ – ನಿರ್ಲಕ್ಷ್ಯ ಬೇಡ ಎಂದು ಎಚ್ಚರಿಸಿದ ಸಚಿವರು
ದೇಶದಲ್ಲಿ ಶಾಂತಿ ಸ್ಥಾಪನೆಗೆ ರಾಮ ಮಂದಿರಕ್ಕಾಗಿ ಬಾಬ್ರಿ ಮಸೀದಿ ಜಾಗ ಕೊಡಿ ಎಂದರು. ಕೊಟ್ಟ ಮೇಲೆ ದೇಶದಲ್ಲಿ ಶಾಂತಿ ಸ್ಥಾಪನೆ ಆಯಿತಾ? ಮುಸ್ಲೀಂರ ಮೇಲೆ ದಾಳಿ, ಹಲ್ಲೆ ನಡೆಯುವುದು ನಿಂತಿದೆಯಾ? ಆರ್ ಎಸ್ ಎಸ್ ಕೈವಾಡದಿಂದಲೇ ದೇಶದಲ್ಲಿ ಅಶಾಂತಿ ನೆಲೆಸಿದೆ ಎಂದು ಗುಡುಗಿದ್ದಾರೆ.
ಪಿ ಎಫ್ ಐ ಕಾರ್ಯದರ್ಶಿಯ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಅನೀಸ್ ಹೇಳಿಕೆ ಮೂರ್ಖತನದ ಪರಮಾವಧಿ. ರಾಮ ಮಂದಿರದ ಬಗ್ಗೆ ಮಾತನಾಡಲು ಅವರಿಗೆ ಯಾವ ಹಕ್ಕಿದೆ? ರಾಮ ಮಂದಿರದ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಕೋರ್ಟ್ ತೀರ್ಪಿನಂತೆ ಮಂದಿರ ನಿರ್ಮಾಣವಾಗುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.