ಬೆಂಗಳೂರು: ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರಕಟವಾಗಿದ್ದು, ಅಚ್ಚರಿ ಹೆಸರನ್ನು ಘೋಷಿಸುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದೆ.
ಅಶೋಕ್ ಗಸ್ತಿ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಡಿ.1ರಂದು ಚುನಾವಣೆ ನಡೆಯಲಿದೆ. ಇದೀಗ ಬಿಜೆಪಿ ಹೈಕಮಾಂಡ್ ಅಚ್ಚರಿಯ ಹೆಸರನ್ನು ಪ್ರಕಟಿಸಿದ್ದು, ಡಾ.ಕೆ. ನಾರಾಯಣ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ರಾಜ್ಯ ನಾಯಕರಿಗೆ ಮತ್ತೆ ಶಾಕ್ ನೀಡಿದೆ.
ರಾಜ್ಯ ಬಿಜೆಪಿ ಘಟಕ ಮೂವರ ಹೆಸರನ್ನು ಶಿಫಾರಸು ಮಾಡಿತ್ತು. ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಂಕರಪ್ಪ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹೆಸರನ್ನು ಸೂಚಿಸಿತ್ತು. ಆದರೆ ಹೈಕಮಾಂಡ್ ರಾಜ್ಯ ಬಿಜೆಪಿ ಸೂಚಿಸಿದ್ದ ಮೂವರ ಹೆಸರನ್ನು ತಿರಸ್ಕರಿಸಿ, ಆರ್.ಎಸ್.ಎಸ್. ಹಿನ್ನೆಲೆಯ ಡಾ.ನಾರಾಯಣ ಎಂಬುವವರ ಹೆಸರನ್ನು ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ.