ಬೆಂಗಳೂರು: ರೂಪಾಂತರ ಕೊರೊನಾ ಸೋಂಕು ನಿಯಂತ್ರಣಕ್ಕೆ ಹೊರಡಿಸಿದ್ದ ನೈಟ್ ಕರ್ಫ್ಯೂ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಜನವರಿ 2ರವರೆಗೆ ಜಾರಿಗೊಳಿಸಿದ್ದ ನೈಟ್ ಕರ್ಫ್ಯೂ ಬಗ್ಗೆ ಸಾರ್ವಜನಿಕರಿಂದ ಮಾತ್ರವಲ್ಲ ವಿಪಕ್ಷ ಹಾಗೂ ಸ್ವಪಕ್ಷೀಯ ಶಾಸಕರೇ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.
ಹಗಲಲ್ಲಿ ಸಾರ್ವಜನಿಕರ ಓಡಾಟಕ್ಕೆ, ಕ್ರಿಸ್ ಮಸ್ ಆಚರಣೆಗೂ ಅವಕಾಶ ನೀಡಿ, ರಾತ್ರಿ ವೇಳೆ ಮಾತ್ರ ಕಾಟಾಚಾರಕ್ಕೆ ಕರ್ಫ್ಯೂ ಜಾರಿಗೊಳಿಸಿದ್ದ ಸರ್ಕಾರದ ನಡೆ ಹಾಸ್ಯಾಸ್ಪದ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ರಾಜ್ಯ ಸರ್ಕಾರ ಒಂದೇ ದಿನದಲ್ಲಿ ಯುಟರ್ನ್ ಹೊಡೆದಿದ್ದು, ಜನಾಕ್ರೋಶಕ್ಕೆ ಮಣಿದು ನೈಟ್ ಕರ್ಫ್ಯೂ ಆದೇಶವನ್ನು ಹಿಂಪಡೆದಿದೆ.