ಮಂಗಳೂರು: ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಅರಬ್ಬಿ ಸಮುದ್ರದಲ್ಲಿ ದುರಂತಕ್ಕೀಡಾಗಿದ್ದ ಎನ್ಎಂಪಿಟಿ ಬೋಟ್ ನಲ್ಲಿ ಸಿಲುಕಿದ್ದ 9 ಜನರನ್ನು ಇದೀಗ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ಉಂಟಾದ ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ನಿನ್ನೆ ಎನ್ಎಂಪಿಟಿ ಬೋಟ್ ಸಮುದ್ರದಲ್ಲಿ ಮಗುಚಿ ದುರಂತಕ್ಕೀಡಾಗಿತ್ತು. ಬೋಟ್ ನಲ್ಲಿದ್ದ ಇಬ್ಬರು ಈಜಿ ದಡ ಸೇರಿದ್ದರೆ, ಓರ್ವ ಮೃತಪಟ್ಟಿದ್ದರು. ಬೋಟ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಳಿದ 9 ಜನರ ರಕ್ಷಣೆಗಾಗಿ ಕರಾವಳಿ ಕಾವಲು ಪಡೆ ನಿನ್ನೆಯಿಂದ ಹರಸಾಹಸ ಪಟ್ಟಿತ್ತು. ಇದೀಗ 9 ಜನರನ್ನು ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ.
ʼಲಾಕ್ ಡೌನ್ʼ ವಿಸ್ತರಣೆ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಸಚಿವ ಮುರುಗೇಶ್ ನಿರಾಣಿ
ಬೋಟ್ ನಲ್ಲಿ ಸಿಲುಕಿದ್ದ 5 ಜನರನ್ನು ಸ್ಪೀಡ್ ಬೋಟ್ ಸಹಾಯದಿಂದ ರಕ್ಷಿಸಲಾಗಿದ್ದರೆ, ನಾಲ್ವರನ್ನು ನೌಕಾಪಡೆಯ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. 9 ಜನರನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.