ಬೆಂಗಳೂರು: ಮೂರು ತಿಂಗಳ ಬಳಿಕ ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ ಜೋರಿಗಿದೆ. ರಾಜ್ಯದಲ್ಲಿಯೂ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೊರೊನಾ ಎರಡನೇ ಅಲೆಯ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಬಿಬಿಎಂಪಿ ಪಾರ್ಕ್ ಗಳಲ್ಲಿ ಓಪನ್ ಜಿಮ್ ಗಳನ್ನು ಬಂದ್ ಮಾಡಲು ಹಾಗೂ ಸ್ವಿಮಿಂಗ್ ಪೂಲ್ ಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ.
ʼಕೊರೊನಾʼ ಲಸಿಕೆ ನಂತ್ರದ ಅನಾರೋಗ್ಯ: ವಿಮಾ ಕಂಪನಿಗಳಿಗೆ IRDA ಮಹತ್ವದ ಸೂಚನೆ
ಅಪಾರ್ಟ್ ಮೆಂಟ್ ಗಳಲ್ಲಿರುವ ಪಾರ್ಟಿ ಹಾಲ್ ಬಂದ್ ಮಾಡಲು, ಕಲ್ಯಾಣ ಮಂಟಪಗಳಲ್ಲಿ 200 ಜನರು ಮಾತ್ರ ಸೇರಲು ಅವಕಾಶ. ಸಿನಿಮಾ ಹಾಲ್ ಗಳಲ್ಲಿ ಶೇ.50 ಜನರಿಗೆ ಮಾತ್ರ ಅವಕಾಶ. ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಪ್ರಸ್ತಾವನೆ ಒಪ್ಪಿದಲ್ಲಿ ಮುಂದಿನ ವಾರದಿಂದಲೇ ಕಟ್ಟುನಿಟ್ಟಿನ ನಿಯಮ ಮತ್ತೆ ಜಾರಿಗೆ ಬರಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.