ಚಿಕ್ಕಮಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ದತ್ತಾತ್ರೆಯನ ಶಾಪವಿದೆ… ಪರಿಹಾರವಾಗಬೇಕು ಎಂದರೆ ಅವರು ದತ್ತಪೀಠಕ್ಕೆ ಬರಲೇಬೇಕು ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಈ ಹಿಂದೆ ಸಿಎಂ ಆದ ಮೇಲೆ ದತ್ತಮಾಲೆ ಧರಿಸಿ ದತ್ತಪೀಠಕ್ಕೆ ಬರುವುದಾಗಿ ಹೇಳಿದ್ದರು. ಆದರೂ ಈವರೆಗೂ ದತ್ತಪೀಠಕ್ಕೆ ಬರಲಿಲ್ಲ. ಹೀಗಾಗಿ ಅವರಿಗೆ ದತ್ತಾತ್ರೆಯ ಶಾಪವಿದೆ. ಶಾಪ ವಿಮೋಚನೆಯಾಗಬೇಕು ಎಂದರೆ ಅವರು ದತ್ತಪೀಠಕ್ಕೆ ಬರಬೇಕು ಎಂದರು.
ದತ್ತಮಾಲೆ ಧರಿಸಿ ಅವರು ದತ್ತಪೀಠಕ್ಕೆ ಬಂದರೆ ಪೂರ್ಣಾವಧಿ ಆಡಳಿತ ಸಾಧ್ಯವಾಗಬಹುದು ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಯಡಿಯೂರಪ್ಪ ದತ್ತಪೀಠಕ್ಕೆ ಬರಲಿ ಎಂದು ಹೇಳಿದರು.