ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮೂಲ ಬಿಜೆಪಿಗರು ಹಾಗೂ ವಲಸಿಗರ ನಡುವೆ ಜಂಗೀಕುಸ್ತಿ ಆರಂಭವಾಗಿದೆ. ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ ಗೆದ್ದವರ ಗತಿಯೇನು ಎಂದು ಮೂಲ ಬಿಜೆಪಿಗರು ಸಿಡಿದೆದ್ದಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯ, ಗೆದ್ದವರಿಗೆ ಸಚಿವ ಸ್ಥಾನ ನೀಡುವುದು ನ್ಯಾಯ. ಅದನ್ನು ಬಿಟ್ಟು ಪದೇ ಪದೇ ಸೋತವರ ಹೆಸರು ಪ್ರಸ್ತಾಪ ಮಾಡುತ್ತಾ ಅವರ ಪರ ಬ್ಯಾಟ್ ಬೀಸಿದರೆ ಗೆದ್ದ ಮೂಲ ಬಿಜೆಪಿಗರ ಪಾಡೇನು? ಸೋತವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದಾದರೆ ನಿಮ್ಮ ಸಚಿವ ಸ್ಥಾನ ತ್ಯಾಗ ಮಾಡಿ ಸೋತವರಿಗೆ ಕೊಡಿಸಿ ಎಂದು ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸವಾಲು ಹಾಕಿದರು.
ಮಿತ್ರ ಮಂಡಳಿ ಬಗ್ಗೆ ಯಾವುದೇ ಅಸಮಾಧಾನವಿಲ್ಲ, ನಮ್ಮಲ್ಲಿ ಗುಂಪುಗಾರಿಕೆಯೂ ಇಲ್ಲ. ಆದರೆ ಮುಂದಿನ ವಾರ ಶಾಸಕರೆಲ್ಲ ವರಿಷ್ಥರ ಭೇಟಿಯಾಗಿ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದು ಹೇಳಿದ್ದಾರೆ.