ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿದ್ದು, ಇದೀಗ ಎಸ್ಐಟಿ ಅಧಿಕಾರಿಗಳು ಸಿಡಿ ಲೇಡಿ ಜಾಡು ಪತ್ತೆಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಸಿಡಿ ಯುವತಿ ರಾಜಧಾನಿ ಬೆಂಗಳೂರಿನಲ್ಲಿಯೇ ಇದ್ದು, ಉದ್ಯಮಿಯೋರ್ವರ ಕಾರು ಚಾಲಕನ ಜೊತೆ ಬೆಂಗಳೂರಿನ ಹೊರವಲಯದಲ್ಲಿ ಇದ್ದಾಳೆ ಎಂದು ತಿಳಿದುಬಂದಿದೆ.
ರಮೇಶ್ ಜಾರಕಿಹೊಳಿಗೆ ಟ್ರ್ಯಾಕ್ ಮಾಡಿದ್ದು ನಿಜ ಆದರೆ…….ಡಿ.ಕೆ. ಶಿವಕುಮಾರ್ ಬಿಚ್ಚಿಟ್ಟ ಸತ್ಯವೇನು….?
ಉದ್ಯಮಿ ಶಿವಕುಮಾರ್ ಎಂಬುವವರ ಕಾರು ಚಾಲಕ ಪರಶಿವಮೂರ್ತಿ ಎಂಬುವವರ ಜೊತೆ ಸಿಡಿ ಲೇಡಿ ಇದ್ದು, ಬೆಂಗಳೂರಿನ ಹೊರವಲಯದಿಂದಲೇ ಆಕೆ ವಿಡಿಯೋ ಮಾಡಿ ಕಳುಹಿಸುತ್ತಿದ್ದಾಳೆ ಎನ್ನಲಾಗುತ್ತಿದೆ. ಸಿಡಿ ಪ್ರಕರಣದ ಪ್ರಮುಖ ಆರೋಪಿಗಳಾದ ನರೇಶ್ ಹಾಗೂ ಶ್ರವಣ್ ಉತ್ತರ ಭಾರತದಲ್ಲಿರುವ ಬಗ್ಗೆ ಪೊಲೀಸ್ ಮೂಲಗಳಿಗೆ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಯುವತಿಯ ಪೋಷಕರು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಇಂದು ಸಂಜೆ ವೇಳೆಗೆ ಯುವತಿ ಕೂಡ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.