ಬೆಂಗಳೂರು: ಒಂದು ಬಾರಿ ಕೊರೊನಾ ಸೋಂಕು ತಗುಲಿದರೆ ಜೀವನಪರ್ಯಂತ ನರಕ ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ.
ತಜ್ಞವೈದ್ಯರ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದ್ದು, ಕೊರೋನಾ ಸೋಂಕು ಕುರಿತಾಗಿ ನಿರ್ಲಕ್ಷ್ಯ ತೋರಿದರೆ ಗಂಡಾಂತರ ಗ್ಯಾರಂಟಿ ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ ಆರಾಮಾಗಿ ಇರುವಂತೆ ಕಂಡುಬಂದರೂ ದೇಹದೊಳಗೆ ಕೊರೊನಾ ಸೋಂಕು ಇದ್ದೇ ಇರುತ್ತದೆ ಎನ್ನುವ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ.
ಕೊರೋನಾ ಸೋಂಕಿತರಲ್ಲಿ ಶೇಕಡ 12 ರಷ್ಟು ಜನ ಮಾತ್ರ ಗುಣಮುಖರಾಗುತ್ತಿದ್ದಾರೆ. ಉಳಿದ ಶೇಕಡ 88 ರಷ್ಟು ಸೋಂಕಿತರಿಗೆ ಬಹುಕಾಲ ಕೊರೋನಾ ವೈರಸ್ ಇದ್ದೇ ಇರುತ್ತದೆ. ಒಂದಲ್ಲ ಒಂದು ಅಂಗಕ್ಕೆ ವೈರಸ್ ನಿಂದ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ರೋಗ ಲಕ್ಷಣ ಇಲ್ಲದ ಸೋಂಕಿತರಿಗೆ ಶೇಕಡ 88 ರಷ್ಟು ಮಂದಿ ದೇಹದೊಳಗೆ ವೈರಸ್ ಹಾಗೆಯೇ ಇರುತ್ತದೆ. ಒಂದು ಬಾರಿ ಕೊರೋನಾ ದೇಹ ಹೊಕ್ಕರೆ ಸುಲಭವಾಗಿ ದೇಹ ಬಿಟ್ಟು ಹೋಗಲ್ಲ. ಜೀವನವಿಡಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ಕೊರೋನಾ ಸೋಂಕು ಅನೇಕರ ಅಂಗಕ್ಕೆ ಹಾನಿ ಮಾಡಿದೆ. ಹೃದಯ, ಲಿವರ್ ನಲ್ಲಿ ರಕ್ತ ಹೆಪ್ಪುಗಟ್ಟಿಸುವ ಕೆಲಸವನ್ನು ಇದು ಮಾಡುತ್ತದೆ ಎಂದು ವೈದ್ಯರ ವರದಿ ಹೇಳಿದೆ. ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕರಾದ ಜಯಂತಿ ಈ ಬಗ್ಗೆ ಮಾತನಾಡಿ, ದೇಹದೊಳಗೆ ಉಳಿಯುವ ವೈರಸ್ ನಿಂದ ಅಪಾಯವಾಗಬಹುದೆಂದು ಹೇಳಿದ್ದಾರೆ.