ಮಂಗಳೂರು: ತೌಕ್ತೆ ಚಂಡಮಾರುತ ಕಡಿಮೆಯಾದರೂ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಮೀನುಗಾರಿಕಾ ಬೋಟ್ ವೊಂದು ದಡಕ್ಕಪ್ಪಳಿಸಿದ ಪರಿಣಾಮ ಬೋಟ್ ನಲ್ಲಿದ್ದ ಮೀನುಗಾರರು ಸಂಕಷ್ಟಕ್ಕೀಡಾಗಿದ್ದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಕೋಡಿಯಲ್ಲಿ ನಡೆದಿದೆ.
ಕ್ಯಾಪ್ಟನ್ ಬದಲಿಗೆ ಮೀನುಗಾರರಿಂದಲೇ ಬೋಟ್ ಚಲಾಯಿಸಿದ ಪರಿಣಾಮ ಬೋಟ್ ಚಾಲನೆ ಸರಿಯಾಗಿ ಬಾರದೇ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬೋಟ್ ಉಳ್ಳಾಲ ಕೋಡಿ ಬಳಿ ಬರುತ್ತಿದ್ದಂತೆ ಅಲೆಗಳ ಆರ್ಭಟ ಹೆಚ್ಚಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೋಟ್ ದಡಕ್ಕೆ ಬಂದು ಗುದ್ದಿದೆ. ಬೋಟ್ ನಲ್ಲಿದ್ದ 5 ಮೀನುಗಾರರಿಗೆ ವಾಂತಿ ಶುರುವಾಗಿ ಅನಾರೋಗ್ಯಕ್ಕೀಡಾಗಿದ್ದಾರೆ.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜನರೇಟರ್ ಸ್ಫೋಟ: ನೋಡನೋಡುತ್ತಿದ್ದಂತೆ ಹೊತ್ತಿ ಉರಿದ ಕೊಠಡಿ
ಬೋಟ್ ನಲ್ಲಿದ್ದ 10 ಮೀನುಗಾರರನ್ನು ಪೊಲೀಸರು ರಕ್ಷಿಸಿದ್ದಾರೆ. 5 ಮೀನುಗಾರರು ಮದ್ಯಸೇವನೆ ಮಾಡಿದ್ದರು ಎನ್ನಲಾಗಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.