ಕೆಲ ದಿನಗಳ ಹಿಂದಷ್ಟೇ ಕಬಿನಿ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕರಿ ಚಿರತೆಯ ಫೋಟೋ ಮಾಸುವ ಮೊದಲೇ ಇದೀಗ ಕರಿ ಚಿರತೆಯ ಜತೆ ಸಾಮಾನ್ಯ ಚಿರತೆಯೊಂದು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಇದೀಗ ಇದೇ ಅರಣ್ಯ ಪ್ರದೇಶದಲ್ಲಿ ಸಾಮಾನ್ಯ ಚಿರತೆಯ ಹಿಂದೆ ಕರಿ ಚಿರತೆ ನಿಂತು ಫೋಟೋಗೆ ಪೋಸ್ ನೀಡುತ್ತಿದೆ. ಈ ಫೋಟೋ ನೋಡಿದ ಅನೇಕರು ಚಿರತೆಯ ನೆರಳಿನ ರೀತಿ ಕಾಣುತ್ತದೆ ಎಂದು ಹೇಳಿದ್ದಾರೆ, ಈ ಫೋಟೋವನ್ನು ಮಿಥುನ್ ಎನ್ನುವವರು ಕ್ಲಿಕ್ಕಿಸಿದ್ದಾರೆ.
ಈ ರೀತಿಯ ಅದ್ಭುತ ಫೋಟೋ ಸಿಗುವುದಕ್ಕೆ ಮೊದಲು ತಾಳ್ಮೆ ಅಗತ್ಯ ಎನ್ನುವ ಮಾತನ್ನು ಹೇಳಿದ್ದಾರೆ. ಇದೀಗ ಚಿರತೆ ಹಾಗೂ ಅಪರೂಪದ ಕರಿ ಚಿರತೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಫೋಟೋವನ್ನು ಇದೀಗ 50 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
https://www.instagram.com/p/CC0-NP3JMmO/?utm_source=ig_embed