
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಲು ಸಾಲು ಕೊಲೆ ಪ್ರಕರಣ, ಅಪರಾಧ ಕೃತ್ಯಗಳ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿರುವ ರಾಜ್ಯ ಬಿಜೆಪಿ ರಾಜ್ಯದಲ್ಲಿ ಪಾ’ಕೈ’ಸ್ತಾನ್ ಸರ್ಕರದಿಂದ ತಾಲಿಬಾನ್ ಮಾಡೆಲ್ ಜಾರಿಯಾಗಿದೆ ಎಂದು ಟೀಕಿಸಿದೆ.
ಜೈ ಶ್ರೀರಾಮ್ ಎಂದರೆ ಬ್ರದರ್ಸ್ ಗಳಿಂದ ಹಲ್ಲೆ. ಲವ್ ಜಿಹಾದ್ ಗೆ ಒಪ್ಪದಿದ್ದರೆ ಬರ್ಬರ ಹತ್ಯೆ, ಒಡೆಯರ್ ಪರ ನಿಂತರೆ ಕಾರು ಹರಿಸಿ ಕೊಲೆ, ಡ್ರಾಪ್ ಕೊಟ್ಟರೆ ಮತಂಧರಿಂದ ಹಿಗ್ಗಾಮುಗ್ಗಾ ಥಳಿತ. ಕನ್ನಡ ಮಾತನಾಡುದರೆ ನಟಿ ಮೇಲೆಯೇ ಹಲ್ಲೆ ಯತ್ನ.
ಚುನಾವಣೆ ಸಮಯದಲ್ಲಿ ಜಿಹಾದಿ ಮತಾಂಧ ಬ್ರದರ್ಸ್ ಗಳನ್ನು ಸಿದ್ದರಾಮಯ್ಯ ಹಾಗೂ ಆ ದಿನಗಳ ಕೊತ್ವಾಲ್ ಶಿಷ್ಯ ಡಿ.ಕೆ.ಶಿವಕುಮರ್ ಅವರು ಬೀದಿಗೆ ಬಿಟ್ಟು ಹಿಂದೂಗಳನ್ನೇ ತಾರ್ಗೆಟ್ ಮಾಡಿ ಬೆದರಿಸುತ್ತಿದ್ದಾರೆ. ಕರ್ನಾಟಕವನ್ನು ಮತಾಂಧರ ಗಲಭೆಯ ತೋಟವನ್ನಾಗಿ ಮಾಡಿದೆ ರಾಹುಲ್ ಗಾಂಧಿ ಅವರ ದ್ವೇಷದ ಅಂಗಡಿ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.