ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ರಾತ್ರಿ ಮಾಗಡಿ ರಸ್ತೆಯ ಪ್ರಗತಿ ಲೇ ಔಟ್ನಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಟಿ ಜಯಶ್ರೀ ಈ ಹಿಂದೆಯೂ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸಾವಿನ ಬಗ್ಗೆ ಮಾತನಾಡಿದ್ದ ನಟಿ ಜಯಶ್ರೀ 7 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿಕೊಂಡಿದ್ದರು.
ಮಾತ್ರವಲ್ಲದೇ 5 ವರ್ಷ ವಯಸ್ಸಿನಲ್ಲೇ ನನ್ನ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ನನ್ನ ಮೇಲೆ ಹುಡುಗಿಯರೂ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ನನಗೆ ದಯಾಮರಣ ಬೇಕು ಎಂದೆಲ್ಲ ಕೇಳಿಕೊಂಡಿದ್ದರು. ಇದೀಗ ನಿನ್ನೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮೃತ ನಟಿ ಜಯಶ್ರೀ ಕನ್ನಡ ಗೊತ್ತಿಲ್ಲ, ಉಪ್ಪು ಹುಳಿ ಖಾರ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ ಬಿಗ್ ಬಾಸ್ಶೋನಲ್ಲೂ ಸ್ಪರ್ಧಿಯಾಗಿದ್ದರು.