ಬೆಂಗಳೂರು : ಬಿಗ್ ಬಾಸ್ ಸೀಸನ್-10 ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದ್ದು, 50 ನೇ ದಿನವನ್ನು ತಲುಪಿದೆ.
ಎಲಿಮಿನೇಷನ್ ತೂಗುಕತ್ತಿಯಿಂದ ನಮ್ರತಾ ಸೇಫ್, ತುಕಾಲಿ ಸಂತೋಷ್, ಸ್ನೇಹಿತ್ ಸೇಫ್ ಎಂದು ಕಿಚ್ಚ ಸುದೀಪ್ ಘೋಷಿಸಿದರು. ಅಂತೆಯೇ ಸಿರಿ ಕೂಡ ಸೇಫ್ ಆದರು. ಆದರೆ ನೀತು ವನಜಾಕ್ಷಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಟ್ರಾನ್ಸ್ಜೆಂಡರ್ ಸಮುದಾಯದಿಂದ ಬಂದಿರುವ ನೀತು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಬಿದ್ದಿದ್ದಾರೆ.
ಟ್ರಾನ್ಸ್ಜೆಂಡರ್ ಆಗಿರುವ ನನಗೆ ಬಿಗ್ ಬಾಸ್ ವೇದಿಕೆ ಕೊಟ್ಟಿದ್ದಕ್ಕೆ ಬಹಳ ಧನ್ಯವಾದಗಳು. ಎಲ್ಲರ ಪ್ರೀತಿ ನನಗೆ ನೂರಕ್ಕೆ ನೂರು ಸಿಕ್ಕಿದೆ. ಆ ಪ್ರೀತಿಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಖುಷಿಯಿದೆ ಎಂದು ನೀತು ಹೇಳಿದರು. ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಮುನ್ನ ನೀತು ಮೈಕಲ್ ಅವರನ್ನು ನಾಯಕನನ್ನಾಗಿ ನೇಮಿಸಿ ಹೋಗಿದ್ದಾರೆ.
ಬಿಗ್ ಬಾಸ್” ಕನ್ನಡದ ಇಷ್ಟು ಸೀಸನ್ನಲ್ಲಿ ಇದೇ ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದವರೊಬ್ಬರು ಶೋನಿಂದ ಎಲಿಮಿನೇಟ್ ಆಗಿದ್ದು ಇದೇ ಮೊದಲು.