ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ ಐ ಟಿ ಅಧಿಕಾರಿಗಳು ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಎಸ್ ಐ ಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಮಾಜಿ ಸಚಿವರೇ ತಬ್ಬಿಬ್ಬಾದ ಘಟನೆ ನಡೆದಿದೆ.
ಸುಮಾರು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್ ಐ ಟಿ ಅಧಿಕಾರಿಗಳು 56 ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಸಿಡಿ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ, ಸಿಡಿಯಲ್ಲಿನ ಯುವತಿ ಬಗ್ಗೆಯಾಗಲಿ, ಆರೋಪಿಗಳ ಬಗ್ಗೆಯಾಗಲಿ ತನಗೆ ಗೊತ್ತಿಲ್ಲ. ಯುವತಿಯಿಂದಾಗಲಿ, ನನ್ನ ಫೋನ್ ನಿಂದ ಯುವತಿಗಾಗಲಿ ಯಾವುದೇ ಕರೆಗಳು ಕೂಡ ಬಂದಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಗೂಗಲ್, ಆಪಲ್ ಗೆ ಮೋದಿ ಸರ್ಕಾರದಿಂದ ಬಿಗ್ ಶಾಕ್: ದೇಸಿ ಮೊಬೈಲ್ ಸೇವಾ ಆಪ್ ರಿಲೀಸ್
ಈ ವೇಳೆ ಎಸ್ ಐ ಟಿ ಅಧಿಕಾರಿಗಳು ಸುಮಾರು 20 ನಿಮಿಷ ಅವಧಿಯ ಕರೆಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಮಾಜಿ ಸಚಿವರ ಮುಂದಿಟ್ಟಿದ್ದಾರೆ. ದಾಖಲೆ ನೋಡಿದ ಮಾಜಿ ಸಚಿವರು ಕೆಲ ಕಾಲ ಶಾಕ್ ಆಗಿದ್ದಾರೆ ಎನ್ನಲಾಗಿದೆ. ಯುವತಿಯನ್ನು ನಾನು ಯಾವತ್ತೂ ಭೇಟಿಯಾಗಿಲ್ಲ, ಆಕೆ ಯಾರೆಂಬುದೂ ನನಗೆ ಗೊತ್ತಿಲ್ಲ. ನಾನೊಬ್ಬ ಅಕ್ಷರಸ್ಥ. ಇದೆಲ್ಲವೂ ನನ್ನ ವಿರುದ್ಧ ನಡೆದ ಷಡ್ಯಂತ್ರ. ನಿಮ್ಮ ಹಲವು ಪ್ರಶ್ನೆಗಳಿಗೆ ವಕೀಲರ ಬಳಿ ಕೇಳಿ ಉತ್ತರ ನೀಡುತ್ತೇನೆ ಎಂದು ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ.