ಬೆಂಗಳೂರು: ಹಾವೇರಿಯಲ್ಲಿ ಆಯೋಜಿಸಲಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತಾತ್ಕಾಲಿಕ ಮುಂದೂಡಿಕೆಯಾಗಿದೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಕೊರೊನಾ ನಿಯಮಗಳ ಪಾಲನೆ ಕಷ್ಟಕರವಾಗಿರುವ ಕಾರಣಕ್ಕೆ ಫೆಬ್ರವರಿ 26ರಿಂದ 28ವರೆಗೆ ನಡೆಯಬೇಕಿದ್ದ ಸಮ್ಮೇಳನ ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ನೂರು ಕೇಸ್ ಹಾಕಿದರೂ ಗೆದ್ದು ಬರ್ತೀನಿ…..ನಿಮ್ಮ ಮಾತಿನ ರೀತಿ ಬದಲಿಸಿಕೊಳ್ಳಿ… ‘ಟಗರು’ ವಿರುದ್ಧ ‘ರಾಜಾಹುಲಿ’ ಘರ್ಜನೆ
ಫೆಬ್ರವರಿ ಅಂತ್ಯಕ್ಕೆ ಕೋವಿಡ್ ಹೊಸ ಮಾರ್ಗಸೂಚಿ ಪ್ರಕಟವಾಗಲಿದ್ದು, ಮಾರ್ಚ್ 9ರಂದು ಮತ್ತೊಂದು ಸಭೆ ನಡೆಸಿ ಸಮ್ಮೇಳನ ನಡೆಸುವ ದಿನಾಂಕ ತಿಳಿಸಲಾಗುವುದು ಎಂದು ಹೇಳಿದ್ದಾರೆ.