ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದ್ದು, 446 ಜನರಲ್ಲಿ ಈ ಶಿಲೀಂದ್ರ ಸೋಂಕು ಪತ್ತೆಯಾಗಿದ್ದು, 12 ಜನರು ಹೆಮ್ಮಾರಿಗೆ ಬಲಿಯಾಗಿದ್ದಾರೆ.
ಮಾನವರ ಗರಿಷ್ಠ ಆಯುಷ್ಯವೆಷ್ಟು…? ಇಲ್ಲಿದೆ ವಿಜ್ಞಾನಿಗಳು ನೀಡಿರುವ ಉತ್ತರ
ಕೊರೊನಾದಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬರುತ್ತಿದ್ದು, ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕೇಸ್ ಅಂದರೆ 99 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಬೆಂಗಳೂರಿನಲ್ಲಿ 86 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ಪಾರ್ಟಿ ಫೋಟೋದಲ್ಲಿ ’ಭೂತ’ ಕಂಡು ಬೆಚ್ಚಿ ಬಿದ್ದ ಯುವತಿ…!
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚುತ್ತಿದ್ದು, ಬೆಂಗಳೂರು ನಗರದಲ್ಲಿ 17, ಗ್ರಾಮಾಂತರ 4, ಬೊಮ್ಮನಹಳ್ಳಿ 28, ಬೆಂಗಳೂರು ಈಸ್ಟ್ 5, ಸೌಥ್ ಝೋನ್ 3, ವೆಸ್ಟ್ ಝೋನ್ 3 ಹಾಗೂ ಯಲಹಂಕದಲ್ಲಿ 26 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿರುವುದು ಆತಂಕವನ್ನುಂಟುಮಾಡಿದೆ.