ಬೆಂಗಳೂರು; ಸಾರಿಗೆ ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಕರ್ತವ್ಯಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಎಂಟಿಸಿ ಮುಂದಾಗಿದ್ದು, ಮುಷ್ಕರ ಹತ್ತಿಕ್ಕಲು ಸರ್ವಪ್ರಯತ್ನ ನಡೆಸಿದೆ.
ಮುಷ್ಕರದಲ್ಲಿ ಭಾಗವಹಿಸಿರುವ 118 ಸಾರಿಗೆ ಸಿಬ್ಬಂದಿಗಳನ್ನು ಬಿಎಂಟಿಸಿ ವಜಾ ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ ಸೀನಿಯರ್ ನೌಕರರಿಗೆ ನಿವೃತ್ತಿ ನಿಡುವ ಎಚ್ಚರಿಕೆಯನ್ನು ನೀಡಿದೆ. 55 ವರ್ಷ ಮೇಲ್ಪಟ್ಟ ಬಿಎಂಟಿಸಿ ಸಿಬ್ಬಂದಿ ವೈದ್ಯಕೀಯ ಹಾಗೂ ದೇಹದಾರ್ಡ್ಯತೆ ಪ್ರಮಾಣ ಪತ್ರವನ್ನು ಏಪ್ರಿಲ್ 12ರಂದು ಸಲ್ಲಿಸಬೇಕು ಎಂದು ಸಂಸ್ಥೆ ಸೂಚಿಸಿದೆ.
ಮೆಡಿಕಲ್ ಪ್ರಮಾಣಪತ್ರ ಸಲ್ಲಿಸದಿದ್ದಲ್ಲಿ ಸೇವೆಯಿಂದ ನಿವೃತ್ತಿ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದೆ. ಬಿಎಂಟಿಸಿಯ 998 ಸಿಬ್ಬಂದಿಗಳು 55 ವರ್ಷ ಮೇಲ್ಪಟ್ಟಿದ್ದು ಅವರಿನ್ನೂ ಸರ್ಟಿಫಿಕೇಟ್ ಸಲ್ಲಿಸಿಲ್ಲ ಎನ್ನಲಾಗಿದೆ. ಒಟ್ಟಾರೆ ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ಸರ್ಕಾರ ಎಲ್ಲಾ ರೀತಿಯ ಕ್ರಮಕ್ಕೆ ಮುಂದಾಗಿದೆ.