ಕರ್ನಾಟಕ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಫಿಟ್ ಆಗಿರುವಂತೆ ಇದೀಗ ಮಹತ್ವದ ಸೂಚನೆಯೊಂದು ಹೊರಬಿದ್ದಿದೆ. ಈ ಸಿಬ್ಬಂದಿ ಎತ್ತರಕ್ಕೆ ತಕ್ಕಂತೆ ಸರಾಸರಿ ತೂಕ ಹೊಂದಿರಬೇಕಾಗಿದ್ದು, ಒಂದೊಮ್ಮೆ ತೂಕ ಹೆಚ್ಚಾಗಿದ್ದರೆ ವ್ಯಾಯಾಮ ಮಾಡುವ ಮೂಲಕ ತೂಕ ಇಳಿಸಿಕೊಳ್ಳಲು ತಿಳಿಸಲಾಗಿದೆ.
ಸರಾಸರಿಗಿಂತ ಹೆಚ್ಚು ತೂಕ ಹೊಂದಿರುವ 40 ವರ್ಷದೊಳಗಿನವರು10 ಕೆಜಿ, 40ರಿಂದ 50 ವರ್ಷದೊಳಗಿನವರು 5 ಕೆಜಿ ಮತ್ತು 50ರಿಂದ 55 ವರ್ಷದವರು 2.5 ಕೆಜಿ ತೂಕ ಇಳಿಸಿಕೊಳ್ಳಬೇಕು ಎಂದು ತಾಕೀತು ಮಾಡಲಾಗಿದ್ದು, ಒಂದೊಮ್ಮೆ ತೂಕ ಇಳಿಸಿಕೊಳ್ಳದಿದ್ದರೆ ಮುಂಬಡ್ತಿ ತಡೆ ಹಿಡಿಯಲಾಗುತ್ತದೆ ಎಂದು ಕೆ.ಎಸ್.ಆರ್.ಪಿ. ಎಡಿಜಿಪಿ ಅಲೋಕ್ ಕುಮಾರ್ ಸಂದೇಶ ರವಾನಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬಹುದೊಡ್ಡ ಜಯ: ದೇಶದ ಆರ್ಥಿಕತೆಯಲ್ಲಿ ಗಣನೀಯ ಚೇತರಿಕೆ
ತುರ್ತು ಸಂದರ್ಭಗಳಲ್ಲಿ ಕರ್ನಾಟಕ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಕಾರ್ಯ ನಿರ್ವಹಿಸುವ ಕಾರಣ ಸಿವಿಲ್ ಪೊಲೀಸರಿಗೆ ಹೋಲಿಸಿದರೆ ಕಡಿಮೆ ಸಕ್ರಿಯರಾಗಿರುತ್ತಾರೆ. ಅಲ್ಲದೆ ಹೆಚ್ಚಿನ ಸಮಯ ವಾಹನಗಳಲ್ಲಿ ಕುಳಿತುಕೊಳ್ಳುವ ಕಾರಣ ಬೊಜ್ಜು ಹೆಚ್ಚಾಗಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ಫಿಟ್ ಆಗಿರುವಂತೆ ನೋಡಿಕೊಳ್ಳುವ ಸಲುವಾಗಿ ಈ ಸೂಚನೆ ಹೊರಡಿಸಲಾಗಿದೆ.