alex Certify BIG NEWS: ಹಳ್ಳಿಗಳಿಗೆ ಕೊರೊನಾ ಸೋಂಕು ಹೊತ್ತು ತರುತ್ತಿದ್ದಾರಾ ನಗರ ವಾಸಿಗಳು…? ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಕೊರೊನಾತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹಳ್ಳಿಗಳಿಗೆ ಕೊರೊನಾ ಸೋಂಕು ಹೊತ್ತು ತರುತ್ತಿದ್ದಾರಾ ನಗರ ವಾಸಿಗಳು…? ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಕೊರೊನಾತಂಕ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ 14 ದಿನಗಳ ಲಾಕ್ ಡೌನ್ ಮಾದರಿಯ ಕೋವಿಡ್ ಕರ್ಫ್ಯೂ ಜಾರಿ ಮಾಡಿದೆ. ಇದರ ಬೆನ್ನಲ್ಲೇ ನಗರಗಳನ್ನು ತೊರೆದ ಜನರು ತಮ್ಮ ತಮ್ಮ ಹಳ್ಳಿಗಳನ್ನು ಸೇರಿದ್ದಾರೆ. ಹಾಗಾಗಿ ಈಗ ಗ್ರಾಮೀಣ ಭಾಗಗಳಲ್ಲೂ ಕೊರೊನಾ ಆತಂಕ ಮನೆ ಮಾಡಿದೆ.

ಲಾಕ್ ಡೌನ್ ಜಾರಿಯಾಗುತ್ತಿದ್ದಂತೆಯೇ ಲಕ್ಷಾಂತರ ಜನರು ಬೆಂಗಳೂರನ್ನು ಬಿಟ್ಟು ತಮ್ಮ ಊರುಗಳನ್ನು ಸೇರಿದ್ದಾರೆ. ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲ, ಹೊತ್ತಿನ ಊಟಕ್ಕೂ ತತ್ವಾರವಾಗಿದೆ. ಇನ್ನು ಮನೆ ಬಾಡಿಗೆ, ಕುಟುಂಬ ನಿರ್ವಹಣೆ ಕಷ್ಟಸಾಧ್ಯ ಎಂಬ ಕಾರಣಕ್ಕೆ ಅನಿವಾರ್ಯವಾಗಿ ಊರುಗಳತ್ತ ಜನರು ಹೊರಟಿರುವುದೇನೋ ನಿಜ. ಆದರೆ ರಾಜಧಾನಿಯಲ್ಲಿನ ಕೊರೊನಾ ದುಸ್ಥಿತಿ ನಡುವೆ ಲಕ್ಷಾಂತರ ಜನರು ಬೆಂಗಳೂರು ತೊರೆದು ತಮ್ಮ ಊರು, ಹಳ್ಳಿಗಳತ್ತ ಹೊರಟಿರುವುದರಿಂದ ಅಲ್ಲಿಯೂ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ.

 24 ಗಂಟೆಯಲ್ಲಿ 3,79,257 ಜನರಲ್ಲಿ ಕೊರೊನಾ ಸೋಂಕು ದೃಢ; 3,600ಕ್ಕೂ ಹೆಚ್ಚು ಜನ ಸಾವು

ಬೆಂಗಳೂರಿನಲ್ಲಿ ಈಗಾಗಲೇ ಕೊರೊನಾ ಅಟ್ಟಹಾಸ ಹೆಚ್ಚಿದ್ದು, ಪ್ರತಿದಿನ 22 ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗುತ್ತಿವೆ. ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ನಗರದಲ್ಲಿರುವ ಜನರು ಹಳ್ಳಿಗಳತ್ತ ಮುಖಮಾಡಿರುವುದಷ್ಟೇ ಅಲ್ಲ. ತಮ್ಮ ಜೊತೆಗೆ ಕೊರೊನಾ ಸೋಂಕನ್ನು ಹೊತ್ತು ತರುತ್ತಿದ್ದಾರೆ ಎಂಬ ಆತಂಕ ಹಳ್ಳಿಗರಲ್ಲಿ ಆರಂಭವಾಗಿದೆ. ಬೆಂಗಳೂರಿನಿಂದ ಹೊರಡುತ್ತಿರುವವರು ಯಾರೂ ಕೋವಿಡ್ ಟೆಸ್ಟ್ ಗೆ ಒಳಗಾಗುತ್ತಿಲ್ಲ. ಇನ್ನು ತಮ್ಮ ಊರುಗಳಿಗೆ ಸೇರಿದ ಬಳಿಕವೂ ಟೆಸ್ಟ್ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ಬೆಂಗಳೂರಿನಲ್ಲಿನ ಕೊರೊನಾ ಎರಡನೇ ಅಲೆಯ ಭೀಕರತೆಗಳು ಇನ್ಮುಂದೆ ಗ್ರಾಮಗಳಲ್ಲಿ, ಹಳ್ಳಿ ಹಳ್ಳಿಗಳಲ್ಲೂ ಆರಂಭವಾಗಲಿದೆಯೇ ಎಂಬ ಆತಂಕ ಎದುರಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...