ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಗೆ ಮತ್ತೊಂದು ನೋಟೀಸ್ ನೀಡಲಾಗಿದ್ದು, 5ನೇ ಬಾರಿಗೆ ಎಸ್ಐಟಿ ನೋಟೀಸ್ ನೀಡಿದೆ.
ವಾಟ್ಸಪ್ ಹಾಗೂ ಇ-ಮೇಲ್ ಮೂಲಕವೂ ಸಿಡಿ ಲೇಡಿಗೆ ನೋಟೀಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇ-ಮೇಲ್ ಗೆ ಕಳುಹಿಸಲಾಗಿದ್ದ ನೋಟೀಸ್ ನ್ನು ಯುವತಿ ನೋಡಿದ್ದಾಳೆ. ಆದರೆ ಆಕೆಯಿಂದ ಯಾವುದೇ ಉತ್ತರಗಳು ಬರುತ್ತಿಲ್ಲ.
ಪರೀಕ್ಷೆಯಲ್ಲಿ ಕಾಪಿ ಮಾಡಲು ವಿದ್ಯಾರ್ಥಿ ಮಾಡಿದ ಪ್ಲಾನ್ ಕೇಳಿದ್ರೆ ದಂಗಾಗ್ತೀರಾ….!
ಇನ್ನೊಂದೆಡೆ ಎಸ್ಐಟಿ ಅಧಿಕಾರಿಗಳು ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ ಚೆನ್ನೈ, ದೆಹಲಿಯಲ್ಲಿ ಕೂಡ ಯುವತಿಗಾಗಿ ಶೋಧ ನಡೆದಿದ್ದು, ಆದರೂ ಯುವತಿಯ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಈ ನಡುವೆ ತಮ್ಮ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಯುವತಿಯ ತಂದೆ-ತಾಯಿ ಕೂಡ ದೂರಿನ ಬಳಿಕ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯುವತಿಯ ಪೋಷಕರ ಹುಡುಕಾಟದಲ್ಲೂ ನಿರತವಾಗಿದೆ.