ಬೆಂಗಳೂರು: ಸಾರಿಗೆ ನೌಕರರ ಸಂಕಷ್ಟವನ್ನು ಆಲಿಸದೇ, ಖಾಸಗಿ ವಾಹನ ಚಾಲಕರನ್ನು ತಂದು ಬಸ್ ಓಡಿಸುತ್ತಿರುವ ಸರ್ಕಾರದ ಕ್ರಮ ಖಂಡನೀಯ. ಸರ್ಕಾರದ ಈ ನಡೆ ಯಶಸ್ವಿಯಾಗಲ್ಲ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳು ಪ್ರತಿಭಟನೆ ನಡೆಸಿದರೂ ಸರ್ಕಾರ ಸಾರಿಗೆ ನೌಕರರ ಮುಷ್ಕರಕ್ಕೆ ಬಗ್ಗಲ್ಲ, ಸಂಬಳ ಕೊಡುವುದೂ ಇಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳಿರುವುದು ದೌರ್ಜನ್ಯದ ಪರಮಾವಧಿ. ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಹೇಳಿಕೆ ಸರಿಯಲ್ಲ. ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾತುಕತೆ ಪ್ರಶ್ನೆಯೂ ಇಲ್ಲ; ಸಂಬಳವನ್ನೂ ನೀಡಲ್ಲ: ಮುಷ್ಕರ ನಿರತ ಸಾರಿಗೆ ನೌಕರರಿಗೆ ಸಿಎಂ ಖಡಕ್ ಎಚ್ಚರಿಕೆ
ಸಿಎಂ ಯಡಿಯೂರಪ್ಪನವರು ಮೊಂಡುತನ ಮಾಡುವುದನ್ನು ಬಿಟ್ಟು ಸಾರಿಗೆ ನೌಕರರ ಬೇಡಿಕೆ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸಲಿ ಎಂದು ಆಗ್ರಹಿಸಿದರು.