ಬೆಂಗಳೂರು: ಕೊರೊನಾ ಸಂಕಷ್ಟದಿಂದ ಜನರು ಬಳಲುತ್ತಿರುವ ಇಂತಹ ಸಂದರ್ಭದಲ್ಲಿ ಸರ್ಕಾರ ಜನರಿಗೆ ಸಹಾಯ ಮಾಡಬೇಕು. ಆದರೆ ಸರ್ಕಾರವೇ ಜನರಿಂದ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ವಿದ್ಯಾರ್ಥಿಗಳ ಗಮನಕ್ಕೆ; SSLC ಪ್ರಶ್ನೆ ಪತ್ರಿಕೆ ಪ್ರಕಟ
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳ ಮೂಲಕ ಜನರನ್ನು ಲೂಟಿ ಮಾಡುತ್ತಿವೆ. ಖಾಸಗಿ ಆಸ್ಪತ್ರೆಗೆ ಹೋದರೆ ಯಾವುದೇ ರೋಗ ಇಲ್ಲವೆಂದರೂ 5 ಲಕ್ಷ ರೂಪಾಯಿ ಬಿಲ್ ಮಾಡುತ್ತಾರೆ. ರೋಗ ಇಲ್ಲದಿದ್ದರೂ ಬಿಲ್ ಮಾತ್ರ ಯಾಕೆ ಜಾಸ್ತಿಯಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳ ನಡುವೆ ಅದ್ಯಾವ ಒಪ್ಪಂದ ನಡೆದಿದೆ ಎಂಬುದು ತಿಳಿದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗಮನಿಸಿ: ಪ್ರಧಾನ ಮಂತ್ರಿ ʼಜನ್ ಧನ್ʼ ಖಾತೆ ತೆರೆಯಲು ಈ ದಾಖಲೆ ಕಡ್ಡಾಯ
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನ ಕ್ಯೂ ನಿಲ್ಲುವುದೇ ಆಗಿದೆ. ನೋಟ್ ಬ್ಯಾನ್ ಮಾಡಿ ಬ್ಯಾಂಕ್ ಮುಂದೆ ಕ್ಯೂ ನಿಲ್ಲಿಸಿದರು. ಕೊರೊನಾ ವೇಳೆ ಆಸ್ಪತ್ರೆಗಳ ಬಳಿ ಬೆಡ್ ಗಾಗಿ ಕ್ಯೂ ನಿಲ್ಲಿಸಿದರು. ಸೋಂಕಿತರ ಚಿಕಿತ್ಸೆಗಾಗಿ ಔಷಧಕ್ಕಾಗಿ ಕ್ಯೂ ನಿಲ್ಲಿಸಿದರು. ಅಂತಿಮವಾಗಿ ಸತ್ತಾಗಲೂ ಚಿತಾಗಾರದ ಬಳಿ ಕ್ಯೂ ನಿಲ್ಲುವಂತ ಸ್ಥಿತಿ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.