alex Certify BIG NEWS: ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಚಿಂತನೆಯಿತ್ತು ಆದರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಚಿಂತನೆಯಿತ್ತು ಆದರೆ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಜನರಿಗೆ ಸಚಿವರುಗಳ ಬಗ್ಗೆ ಅಸಹ್ಯ ಹುಟ್ಟಿದೆ. ಹಾಗಾಗಿ ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸಭೆಯ ನಿರ್ಣಯ, ಹೊಸ ಮಾರ್ಗಸೂಚಿಯನ್ನು ಮುಖ್ಯಕಾರ್ಯದರ್ಶಿಗಳ ಮೂಲಕ ಹೇಳಿಸಿದ್ದಾರೆ. ಇದು ರಾಜ್ಯಪಾಲರ ಆಳ್ವಿಕೆಯಂತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಚಿಂತನೆ ಇತ್ತು. ಆದರೆ ಪ್ರಧಾನಿ ಮೋದಿ ಸಲಹೆ ಬಳಿಕ ನಿರ್ಧಾರವನ್ನೇ ಬದಲಿಸಿತು. ಪ್ರಧಾನಿ ಹೇಳಿದ ತಕ್ಷಣ ಕಾನೂನನ್ನೇ ಬದಲಿಸಿದರು. ಈಗ ಕೋವಿಡ್ ನಿಯಂತ್ರಣಕ್ಕೆ ಜನರು ಸಹಕಾರ ನೀಡಬೇಕು. ಎಲ್ಲರೂ ಪಾಲನೆ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕಿಲ್ಲರ್ ಕೊರೊನಾ ಅಟ್ಟಹಾಸಕ್ಕೆ ಖಾಕಿ ಪಡೆ ತತ್ತರ; ರಾಜಧಾನಿಯ 193 ಪೊಲೀಸರಲ್ಲಿ ಸೋಂಕು ಪತ್ತೆ; ಮೂವರು ಬಲಿ

ನಿನ್ನೆ ಪ್ರಧಾನಿ ಮೋದಿ ಪ್ರವಚನ ಮಾಡಿದಂತಿದೆ. ಪ್ರಧಾನಿ ವೇದಿಕೆ ಮೇಲೆ ನಗುತ್ತಿದ್ದಾರೆ. ಅದರೆ ದೇಶದ ಜನರು ಅಳುತ್ತಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿರುವ ಮಾತು ಅರ್ಥಗರ್ಭಿತವಾಗಿದೆ. ಹೊರ ದೇಶಕ್ಕೆ ವ್ಯಾಕ್ಸಿನ್ ಕಳುಹಿಸಿ ವರ್ಲ್ಡ್ ಲೀಡರ್ ಎನಿಸಿಕೊಳ್ಳುವ ಬದಲು ಮೊದಲು ತನಗೆ ಮತ ನೀಡಿದ ದೇಶದ ಜನರಿಗೆ ಲಸಿಕೆ ಕೊಡಬೇಕಿತ್ತು. ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಗುಡುಗಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...