ರಾಮನಗರ: ಸಭಾಪತಿ ಸ್ಥಾನಕ್ಕಾಗಿ ಮಾತ್ರ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಹೊರತು ಬೇರೆ ರೀತಿ ಬಿಜೆಪಿ ಜೊತೆ ಹೊಂದಾಣಿಕೆಯಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಅಭಿವೃದ್ಧಿಗಾಗಿ ಸಭಾಪತಿ ಸ್ಥಾನಕ್ಕೆ ಮಾತ್ರ ಮೈತ್ರಿ ಹೊರತು ಜನ ವಿರೋಧಿ ನೀತಿಗಳ ವಿರುದ್ಧ ಎಂದಿಗೂ ರಾಜಿಯಿಲ್ಲ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಹೆಚ್.ವಿಶ್ವನಾಥ್
ರೈತರು ಕಳೆದ 70 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿಯವರಿಗೆ ರೈತರ ಬಗ್ಗೆ ಗೌರವ ಇದ್ದರೆ ಸಭೆ ಮಾಡಬೇಕಿತ್ತು. ರೈತರ ಗೊಂದಲಗಳಿಗೆ ಖುದ್ದು ಪ್ರಧಾನಿ ಮನವರಿಕೆ ಮಾಡಿಕೊಡಲಿ. ಕೃಷಿ ಮಂತ್ರಿಗಳನ್ನು ಬಿಟ್ಟು ಸಭೆ ಮಾಡುವ ಬದಲು ಇವರೇ ಸಭೆ ಕರೆದು ಕಾಯ್ದೆಗಳಿಂದ ರೈತರಿಗೆ ಆಗುವ ಅನುಕೂಲದ ಬಗ್ಗೆ ತಿಳಿಸಬೇಕಿತ್ತು ಎಂದು ಹೇಳಿದರು.