ವರ್ಗಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರರು ರಾಜಕೀಯ ಪ್ರಭಾವ ಬಳಸುವುದು ಸಾಮಾನ್ಯ ಸಂಗತಿಯಾಗಿದೆ. ತಾವು ಬಯಸಿದ ಜಾಗಕ್ಕೆ ವರ್ಗಾವಣೆಗೊಳ್ಳಲು ನೌಕರರು ರಾಜಕೀಯ ಮುಖಂಡರ ಮೊರೆ ಹೋಗುತ್ತಿದ್ದು, ಅಂತಹ ನೌಕರರುಗಳಿಗೆ ಹೈಕೋರ್ಟ್ ನ ಧಾರವಾಡ ಪೀಠ ಬಿಗ್ ಶಾಕ್ ನೀಡಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ರಾಜಕೀಯ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಿಕೊಂಡಿದ್ದ ನೌಕರರ ವರ್ಗಾವಣೆಯನ್ನು ರದ್ದುಗೊಳಿಸಿರುವ ಹೈಕೋರ್ಟ್, ಐದು ವರ್ಷಗಳ ಕಾಲ ನೌಕರನನ್ನು ಬೆಳಗಾವಿ ವಿಭಾಗಕ್ಕೆ ವರ್ಗಾವಣೆ ಮಾಡದಂತೆ ಸೂಚನೆ ನೀಡಿದೆ.
ಬೆಳಗಾವಿಯ ಭೂಮಾಪನ ಇಲಾಖೆ ಉತ್ತರ ಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದ ನಿಸಾರ್ ಅಹಮದ್ ರಾಜಕೀಯ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಿಕೊಂಡಿರುವುದನ್ನು ಮನಗಂಡ ಹೈಕೋರ್ಟ್ ಈ ತೀರ್ಮಾನ ಕೈಗೊಂಡಿದೆ.