ವಿಜಯಪುರ: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರು ಇಂದು ದೇಶಾದ್ಯಂತ ರೈಲ್ ರೋಕೋ ಚಳುವಳಿಗೆ ಕರೆ ನಿಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ರೈತ ಸಂಘಟನೆಗಳು ರೈಲ್ ರೋಕೋಗೆ ಕೆಲವೆಡೆ ಬೆಂಬಲ ಸೂಚಿಸಿದ್ದು, ವಿಜಯಪುರ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ರೈತರು ರೈತ ಗೀತೆಗಳನ್ನು ಹಾಡುವ ಮೂಲಕ ಚಳುವಳಿಗೆ ಚಾಲನೆ ನೀಡಿದರು. ಬಳಿಕ ರೈಲು ನಿಲ್ದಾಣದೊಳಗೆ ನುಗ್ಗಿ ರೈಲು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ, ಸಂಘರ್ಷ ಏರ್ಪಟ್ಟಿದೆ.
ರೈಲು ಮೈ ಮೇಲೆ ಹಾದು ಹೋದ್ರೂ ಪವಾಡಸದೃಶವಾಗಿ ಪಾರಾದ ಮಹಿಳೆ
ರೈತರಿಗೆ ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿದ್ದು, ರೈಲ್ವೆ ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸರು ರೈತರನ್ನು ತಡೆದಿದ್ದಾರೆ. ಬ್ಯಾರಿಕೇಡ್ ಗಳನ್ನು ತಳ್ಳಿ ಒಳನುಗ್ಗಲು ಯತ್ನಿಸಿದ್ದಾರೆ. ಪೊಲೀಸರು ಹಾಗೂ ರೈತರ ನಡುವೆ ನೂಕಾಟ, ತಳ್ಳಾಟ ನಡೆದಿದ್ದು, ಅಂತಿಮವಾಗಿ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ಬಂಧಿಸಿದ್ದಾರೆ.