ಬೆಂಗಳೂರು: ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೂ ಮಹತ್ವ ಪಡೆದುಕೊಳ್ಳುತ್ತಿದ್ದು, ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಯುವತಿ ಯಾವ ಕೇಸ್ ಬೇಕಾದರೂ ದಾಖಲಿಸಲಿ ನಾನು ಎಲ್ಲದಕ್ಕೂ ರೆಡಿ ಇದ್ದೇನೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ದೂರು ದಾಖಲಿಸಲಿ. ಆಕೆ ನನ್ನ ವಿರುದ್ಧ ರೇಪ್ ಕೇಸ್ ದಾಖಲಿಸಿದರು ಕೂಡ ನಾನು ಕಾನೂನು ಪ್ರಕಾರ ಹೋರಾಡಲು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ವಕಿಲರನ್ನು ಭೇಟಿಯಾಗಿ ಚರ್ಚಿಸಿ ಮುಂದಿನ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.
ಯುವತಿ ಅಂದೇ ಹೊರಗೆ ಬಂದು ದೂರು ದಾಖಲಿಸಬೇಕಿತ್ತು. ಈಗ ವಕೀಲರ ಮೂಲಕ ದೂರು ದಾಖಲಿಸುತ್ತಿದ್ದಾಳೆ. ಇದೆಲ್ಲವೂ ಒಂದು ಷಡ್ಯಂತ್ರ ಎಂದು ನಾನು ಅಂದೇ ಹೇಳಿದ್ದೇನೆ. ಆಕೆ ನನ್ನ ವಿರುದ್ಧ ಯಾವುದೇ ದೂರು ದಾಖಲಿಸಲಿ ನಾನು ಎದುರಿಸಲು ಸಿದ್ಧ ಎಂದು ಹೇಳಿದರು.